ಶುಕ್ರವಾರ, ಸೆಪ್ಟೆಂಬರ್ 20, 2019
29 °C

ಬಾಂಗ್ಲಾದೇಶ ಪ್ರವಾಸಕ್ಕೆ ಸಮ್ಮತಿಸಿದ ಪಿಸಿಬಿ

Published:
Updated:

ಲಾಹೋರ್ (ಪಿಟಿಐ): ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಉದ್ದೇಶ ಹೊಂದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇದೇ ವರ್ಷದ ಡಿಸೆಂಬರ್‌ನಲ್ಲಿ ಬಾಂಗ್ಲಾ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದೆ.ಪಾಕ್ ತಂಡ ಈ ಪ್ರವಾಸದಲ್ಲಿ ಎರಡು ಟೆಸ್ಟ್, ಮೂರು ಏಕದಿನ ಹಾಗೂ ಒಂದು ಟ್ವೆಂಟಿ-20 ಪಂದ್ಯವನ್ನಾಡಲಿದೆ. ಇದರಿಂದ ಉಭಯ ದೇಶಗಳ ನಡುವಿನ ಬಾಂಧವ್ಯ ಉತ್ತಮ ಪಡಿಸಿಕೊಳ್ಳಲು ನೆರವಾಗುತ್ತದೆ ಎಂದು ಪಿಸಿಬಿ ಅಭಿಪ್ರಾಯ ಪಟ್ಟಿದೆ.2008ರ ನಂತರ ಪಾಕ್ ಬಾಂಗ್ಲಾ ನೆಲದಲ್ಲಿ ಯಾವುದೇ ಪಂದ್ಯವನ್ನಾಡಿಲ್ಲ. ಲಂಕಾ ಆಟಗಾರರ ಮೇಲೆ ಭಯೋತ್ಪಾದಕರ ದಾಳಿ ನಡೆದ ಹಿನ್ನೆಲೆಯಲ್ಲಿ 2009ರಲ್ಲಿ ನಡೆಯಬೇಕಿದ್ದ ಏಕದಿನ ಸರಣಿ ಕೂಡಾ ರದ್ದಾಯಿತು. ಭದ್ರತೆಯ ಕಾರಣದಿಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಈ ಸರಣಿಯನ್ನು ತನ್ನ ದೇಶದಲ್ಲಿ ನಡೆಸುವುದನ್ನು ರದ್ದುಪಡಿಸಿತ್ತು.

Post Comments (+)