ಬಾಂಗ್ಲಾ: ಜ.12ರಂದು ನೂತನ ಸಚಿವ ಸಂಪುಟ

7

ಬಾಂಗ್ಲಾ: ಜ.12ರಂದು ನೂತನ ಸಚಿವ ಸಂಪುಟ

Published:
Updated:

ಢಾಕಾ(ಪಿಟಿಐ): ಬಾಂಗ್ಲಾದಲ್ಲಿ ಭಾನುವಾರ(ಜ.12) ಹೊಸ ಸಚಿವ ಸಂಪುಟ ರಚನೆಯಾಗಲಿದ್ದು, ನೂತನ ಸಚಿವರಿಗೆ ಅಧ್ಯಕ್ಷ ಅಬ್ದುಲ್‌ ಹಮೀದ್‌ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಹಿಂದೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದ ಕೆಲ ಸಚಿವರನ್ನು ಪ್ರಧಾನಿ ಶೇಖ್‌ ಹಸೀನಾ ಅವರು ಈ ಬಾರಿ ಸಚಿವ ಸಂಪುಟದಿಂದ ಕೈಬಿಡಲಿದ್ದು, ಸದ್ಯ 30 ಸದಸ್ಯರಿರುತ್ತಾರೆ  ಎಂದು ತಿಳಿದು ಬಂದಿದೆ.ತನಿಖೆಗೆ ವಿಶೇಷ ನ್ಯಾಯಾಲಯ: ದೇಶದಲ್ಲಿ ಹಿಂದೂಗಳ ಮೇಲೆ ನಡೆ­ಯು­ತ್ತಿರುವ ದಾಳಿ ಮುಂದುವರಿದಿದ್ದು, ದಾಳಿಯ ತನಿಖೆ ನಡೆಸಲು ‘ವಿಶೇಷ ನ್ಯಾಯಾಲಯ’ ರಚಿಸಲು ಬಾಂಗ್ಲಾ­ದೇಶ ಸರ್ಕಾರ ಗುರುವಾರ ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry