ಬುಧವಾರ, ಜನವರಿ 29, 2020
24 °C

ಬಾಂಗ್ಲಾ: 8 ಮಂದಿಗೆ ಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ (ಪಿಟಿಐ): 2012ರಲ್ಲಿ ದೇಶದಾದ್ಯಂತ ನಡೆದ ಮುಷ್ಕರ ಅವಧಿಯಲ್ಲಿ ಹಿಂದೂ ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಲೆಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ತ್ವರಿತಗತಿ ನ್ಯಾಯಾಲಯವು ಅವಾಮಿ ಲೀಗ್‌ನ 8 ಕಾರ್ಯಕರ್ತರಿಗೆ ಮರಣದಂಡನೆ ಮತ್ತು ಇತರೆ 13 ಜನರಿಗೆ ಜೀವಾವಧಿ ಶಿಕ್ಷೆ ಘೋಷಿಸಿದೆ.ಜನರು ಕಿಕ್ಕಿರಿದು ಸೇರಿದ್ದ ನ್ಯಾಯಾಲಯದಲ್ಲಿ ನ್ಯಾಯಾ ಧೀಶ ಎಬಿಎಂ ನಿಜಾಮುಲ್‌ ಹಕ್‌, 8 ಜನರಿಗೆ ಮರಣದಂಡನೆ ಪ್ರಕಟಿಸುವಾಗ 6 ಅಪರಾಧಿಗಳು ಮಾತ್ರ ಹಾಜರಿದ್ದರು.

ಪ್ರತಿಕ್ರಿಯಿಸಿ (+)