ಬುಧವಾರ, ಏಪ್ರಿಲ್ 14, 2021
31 °C

ಬಾಂಧವ್ಯದ ಬೀಡಿನಲ್ಲಿ ಬೆಳಕಿನ ಹಬ್ಬ

ಪ್ರಜಾವಾಣಿ ವಾರ್ತೆ / ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಬಹು ಭಾಷೆ, ಸಂಸ್ಕೃತಿ, ಧರ್ಮ, ಸಮುದಾಯ, ವೃತ್ತಿಗಳ ಗುಲ್ಬರ್ಗದ ಜನರ ಬಾಂಧವ್ಯ ಬೆಸವ ಹಬ್ಬ ದೀಪಾವಾಳಿ. ವಿಭಿನ್ನ ಸಂಸ್ಕೃತಿಯ ಬದುಕಿನ ನಡುವೆಯೂ ಎಲ್ಲ ಆಶಯ ಒಂದೇ. `ಅಂತರಂಗ- ಬಹಿರಂಗದಲ್ಲಿ ಅಂಧಕಾರ ಅಳಿದು ಸಮೃದ್ಧಿಯ ಹೊಂಗಿರಣ ಮೂಡಲಿ~ ಎಂಬ ಇಂಗಿತ.ಕೃಷಿಕರು ಧವಸ-ಧಾನ್ಯದ ಫಸಲು, ವರ್ತಕರು ನಗ-ನಗದು, ಗೌಳಿಗಗರು ಎಮ್ಮೆ-ದನ ಕರುಗಳನ್ನು, ಅಕ್ಕ-ತಂಗಿಯರು ಸಹೋದರರನ್ನು, ಪಂಚಶಿಲ್ಪಿಗಳು ಕಸುಬಿನ ಪರಿಕರವನ್ನು ಹೀಗೆ ಪ್ರತಿಯೊಬ್ಬರು ತಮ್ಮ  ತಮ್ಮ ಇಷ್ಟಾರ್ಥಗಳನ್ನು ಪೂಜಿಸುವ ಸಮೃದ್ಧಿಯ ಸಂಕೇತ.ಅಮಾವಾಸ್ಯೆಯ ಹಿಂದು ಮುಂದಿನ ಈ ಅವಧಿಯಲ್ಲಿ ಗೋಪೂಜೆ, ಚಿನ್ನಾಭರಣ ಖರೀದಿ, ಕೆಡುಕು ಹೋಗಿ ಒಳಿತಿನ ಬೆಳಕು (ನರಕಚತುರ್ದಶಿ), ಲಕ್ಷ್ಮೀ ಪೂಜೆ, ಗೋವರ್ಧನ ಗಿರಿ ಎತ್ತಿ ಹಿಡಿದ ಕೃಷ್ಣ ಗೋಪಾಲಕರು- ರೈತರು- ಕೃಷಿಕರನ್ನು ರಕ್ಷಿಸಿದ ನೆನೆಪು, ಸಂಬಂಧಗಳ ಬಾಂಧವ್ಯ ಬೆಸವ ಅಣ್ಣ-ತಂಗಿಯರ ಆರತಿ- ಹಾರೈಕೆ, ಜೈನರ ಧನ್ ತೇರಾಸ್, ಬಂಜಾರರ ಆಚರಣೆ, ಕುಂಭಪೂಜೆ (ಬಿಂದಿಗೆಯಲ್ಲಿ ನೀರನ್ನು ಇಟ್ಟು) ಹೀಗೆ ಎಲ್ಲ ವರ್ಗ, ವೃತ್ತಿ, ಸಮುದಾಯದಲ್ಲೂ ದೀಪಾವಳಿ ತನ್ನದೇ ಅನನ್ಯತೆ ಪಡೆದಿದೆ.  ಈ ಆಚರಣೆಯ ಪರಿಯನ್ನು ಹೇಳುವುದು ಬೆಳಕನ್ನು ಹಿಡಿದಿಟ್ಟಷ್ಟೇ ಕಷ್ಟ.  ವಿಭಿನ್ನ ಆಶಯಗಳು ವಿವಿಧ ಆಚರಣೆ ರೂಪ ಪಡೆದಿವೆ. ಹಣತೆಯ ಮೂಲಕ ಬೆಳಕು, ಧವಸ ಧಾನ್ಯ ಪೂಜೆ ಮೂಲಕ ಪ್ರಕೃತಿ, ಗೋಪೂಜೆ ಮೂಲಕ ಪ್ರಾಣಿ ಹೀಗೆ ನಿರೀಕ್ಷೆಗೆ ನಿಲುಕದ ನಿಸರ್ಗವನ್ನು ಆರಾಧಿಸುವ- ಕೃತಜ್ಞತೆ ಸಲ್ಲಿಸುವ ಪರಿಪಾಠ ಬೆಳೆದುಕೊಂಡು ಬಂದಿದೆ. ಆ ಸಂಭ್ರಮಗಳು ಹಣತೆ, ಪಟಾಕಿ, ಸಿಹಿತಿಂಡಿ, ಹೊಸ ಉಡುಪು, ಚಿನ್ನಾಭರಣ, ಪುಸ್ತಕ ಖರೀದಿಗಳ ಮೂಲಕ ಮನೆ-ಮನದ ಅಂಗಳಕ್ಕೆ ಬಂದಿವೆ.  

`ಯಾದಗಿರಿ ಭಾಗದಿಂದ ಕೆಳಗೆ ದಸರಾಕ್ಕೆ ಹೆಚ್ಚಿನ ಮಹತ್ವ ನೀಡುವುದನ್ನು ಕಾಣುತ್ತೇವೆ.ಆದರೆ  ಗುಜರಾತಿ, ಮರಾಠಿ, ಹೈದರಾಬಾದ್... ಹೀಗೆ ವಿವಿಧ ಪ್ರದೇಶಗಳ ಪ್ರಭಾವ ಬೀರಿದ ಗುಲ್ಬರ್ಗದ ಕಾಲೊನಿಗಿಂತ ಕಾಲೊನಿಯಲ್ಲಿ ವಿಭಿನ್ನ ಆಚರಣೆ ಕಾಣಬಹುದು. ಬಹು ಸಂಸ್ಕೃತಿಯ ಮಧ್ಯೆ ಬಾಂಧವ್ಯದ ಬದುಕೇ ಇಲ್ಲಿನ ವಿಶೇಷ~ ಎನ್ನುತ್ತಾರೆ ವ್ಯಾಪಾರದಲ್ಲಿ ಬ್ಯುಸಿ ಆಗಿರುವ ಎಚ್‌ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.