ಶನಿವಾರ, ಏಪ್ರಿಲ್ 17, 2021
23 °C

ಬಾಂಧವ್ಯ ವೃದ್ಧಿಗೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆರೆಯ ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯ ಪ್ರಕ್ರಿಯೆ ಚಾಲನೆಯಲ್ಲಿದೆ. ಯಾವುದೇ ಪ್ರತಿರೋಧವನ್ನೂ ಸಹಿಸದಂತಹ ಅಲ್ಲಿನ ಮಿಲಿಟರಿ ಪ್ರಭುತ್ವ, ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ದಾರಿ ಮಾಡಿಕೊಟ್ಟಿದ್ದೇ ದೊಡ್ಡ ಬೆಳವಣಿಗೆ.22 ವರ್ಷಕ್ಕೂ ಅಧಿಕ ಕಾಲದ ನಂತರ, ಕಳೆದ ಏಪ್ರಿಲ್‌ನಲ್ಲಿ ನಡೆದ ಮೊದಲ ಮುಕ್ತ ಹಾಗೂ ನ್ಯಾಯಯುತ ಚುನಾವಣೆಯಲ್ಲಿ ಆಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ಪಕ್ಷ, ಸ್ಪರ್ಧಿಸಿದ್ದ  44 ಸ್ಥಾನಗಳಲ್ಲಿ 43 ಸ್ಥಾನಗಳನ್ನು ಗೆದ್ದುಕೊಂಡು ದಿಗ್ವಿಜಯ ಸಾಧಿಸಿತ್ತು.ಪ್ರಜಾಪ್ರಭುತ್ವ ಪ್ರಕ್ರಿಯೆಯ ಹೊಸ ಗಾಳಿ ಬೀಸುತ್ತಿರುವ ಈ ಸಂದರ್ಭದಲ್ಲೇ ವಿದೇಶಿ ಹಣಹೂಡಿಕೆಗಳಿಗೂ ಮ್ಯಾನ್ಮಾರ್ ಯತ್ನಿಸುತ್ತಿದೆ. ಈ ಸನ್ನಿವೇಶದಲ್ಲೇ, ಈಗ ಆ ರಾಷ್ಟ್ರದ ಪ್ರತಿಪಕ್ಷದ ನಾಯಕಿಯಾಗಿರುವ ಆಂಗ್ ಸಾನ್ ಸೂ ಕಿ ನವೆಂಬರ್ 13ರಿಂದ ನಾಲ್ಕು ದಿನ ಭಾರತಕ್ಕೆ ಭೇಟಿ ನೀಡಿ ಬೆಂಗಳೂರಿಗೂ ಬಂದು ಹೋಗಿರುವುದು ದೊಡ್ಡ ಮೈಲಿಗ್ಲ್ಲಲು.ನವದೆಹಲಿಯಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ಯೌವನದ ಆರಂಭದ ದಿನಗಳನ್ನು ಕಳೆದಿದ್ದ ಸೂಕಿಗೆ ಭಾರತದ ಭೇಟಿ ಭಾವನಾತ್ಮಕವಾದದ್ದು. ಆದರೆ ಭಾವನಾತ್ಮಕತೆಯ ಜೊತೆಗೆ ಅಲ್ಲಿ ನೋವೂ ಇತ್ತು. ಕಳೆದ ಎರಡು ದಶಕಗಳಲ್ಲಿ  ಮ್ಯಾನ್ಮಾರ್‌ನಲ್ಲಿದ್ದ ಮಿಲಿಟರಿ ಆಡಳಿತಕ್ಕೆ ಭಾರತ ಸರ್ಕಾರ ನೀಡಿದ್ದ ಬೆಂಬಲ ಕುರಿತಾದ ನೋವು ಅದು. ಆ ನೋವನ್ನು ಅವರು ತಮ್ಮ ಮಾತುಗಳಲ್ಲಿ ಬಹರಂಗವಾಗಿಯೇ ವ್ಯಕ್ತಪಡಿಸ್ದ್ದಿದಾರೆ.`ನಮ್ಮ ಅತ್ಯಂತ ಕ್ಲಿಷ್ಟಕರ ದಿನಗಳಲ್ಲಿ ಭಾರತ ನಮ್ಮಿಂದ ದೂರವಾಗಿತ್ತು. ಆದರೆ ನಮ್ಮೆರಡು ರಾಷ್ಟ್ರಗಳ ನಡುವಣ ಮೈತ್ರಿಯ ಬಗ್ಗೆ ನನಗೆ ವಿಶ್ವಾಸವಿದ್ದೇ ಇತ್ತು~ ಎಂಬಂತಹ ಅವರ ಮಾತುಗಳ್ಲ್ಲಲಿ ಈ ಅಸಂತೋಷ ವ್ಯಕ್ತವಾಗಿದೆ.ಆದರೆ ಈ ಭೇಟಿ - ಭಾರತದಿಂದ ತನಗಿರುವ ನಿರೀಕ್ಷೆಗಳನ್ನು ಸೂ ಕಿ   ಅವರು ವ್ಯಕ್ತಪಡಿಸುವುದಕ್ಕೆ ಒಂದು ಅವಕಾಶವೂ ಆಗಿತ್ತು ಎಂಬುದೂ ಮುಖ್ಯ. ಈ ಹಿನ್ನೆಲೆಯಲ್ಲೇ ಪ್ರಜಾಪ್ರಭುತ್ವದ ಪಥದಲ್ಲಿರುವ ರಾಷ್ಟ್ರಕ್ಕೆ ಭಾರತದ ನೆರವು ಕೋರುವಂತಹ ವಿವೇಕವನ್ನೂ ಈ ಸಂದರ್ಭದಲ್ಲಿ ಸೂ ಕಿ ಪ್ರದರ್ಶಿಸಿದ್ದಾರೆ. ಸೂ ಕಿ ಹಾಗೂ ಅವರ ಪ್ರಜಾಸತ್ತಾತ್ಮಕ ಚಳವಳಿಗೆ ಭಾರತದಲ್ಲಿರುವ ಸದ್ಭಾವನೆಯನ್ನು ಪರಿಗಣಿಸಿದಲ್ಲಿ, ಭಾರತ - ಮ್ಯಾನ್ಮಾರ್ ದ್ವಿಪಕ್ಷೀಯ ಬಾಂಧವ್ಯವವನ್ನು ಹೊಸ ಎತ್ತರಗಳಿಗೆ ಒಯ್ಯುವುದು ಕ್ಲಿಷ್ಟಕರವೇನೂ ಅಲ್ಲ. 2015ಕ್ಕೆ ಮ್ಯಾನ್ಮಾರ್‌ನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ.ಇದಕ್ಕೂ ಮುಂಚೆ ರಾಷ್ಟ್ರದೊಳಗೆ ಸಾಮಾಜಿಕ, ಆರ್ಥಿಕ ಬೆಳವಣಿಗೆಗಳನ್ನು ತ್ವರಿತಗೊಳಿಸುವ ಅವಕಾಶಗಳಿಗೆ ಮ್ಯಾನ್ಮಾರ್ ತೆರೆದುಕೊಂಡಿದೆ. ವ್ಯಾಪಾರ ಹಾಗೂ ಉದ್ಯಮಶೀಲತೆಯ ಮಟ್ಟಗಳಲ್ಲಿ  ಹೆಚ್ಚಿನ ದ್ವಿಪಕ್ಷೀಯ ಬಾಂಧವ್ಯಗಳ ವಿಸ್ತರಣೆಗೆ ಇದು ಅನುವು ಮಾಡಿಕೊಡುತ್ತದೆ.ಭಾರತದ ಈಶಾನ್ಯ ವಲಯ 1643 ಕಿ.ಮಿ.ಗಳಷ್ಟು ಗಡಿಯನ್ನು ಮ್ಯಾನ್ಮಾರ್‌ನೊಂದಿಗೆ ಹಂಚಿಕೊಂಡಿದೆಯಲ್ಲದೆ, ಮ್ಯಾನ್ಮಾರ್ (ಹಿಂದಿನ ಬರ್ಮಾ) ಜೊತೆಗಿನ ನಮ್ಮ ಪಾರಂಪರಿಕ ಬಾಂಧವ್ಯವನ್ನೂ ಮರೆಯಲಾಗದು. ಈಗ ಪ್ರಜಾಪ್ರಭುತ್ವದ ಹಾದಿಯತ್ತ ಸಾಗುತ್ತಿರುವ ಮ್ಯಾನ್ಮಾರ್  ಜೊತೆಗೆ  ವಿವಿಧ ನೆಲೆಗಳಲ್ಲಿ ಬಾಂಧವ್ಯ ವೃದ್ಧಿಯ ಪ್ರಯತ್ನಗಳನ್ನು ಸೂ ಕಿ ಯವರ ಭಾರತ ಭೇಟಿ ಗಟ್ಟಿಗೊಳಿಸುವಂತಾಗಬೇಕು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.