ಬಾಂಬರ್‌ ಬಾಲಕಿ ಬಂಧನ

7

ಬಾಂಬರ್‌ ಬಾಲಕಿ ಬಂಧನ

Published:
Updated:
ಬಾಂಬರ್‌ ಬಾಲಕಿ ಬಂಧನ

ಕಂದಹಾರ್(ಎಎಫ್‌ಪಿ): ಸ್ಫೋಟಕಗಳನ್ನು ಒಳಗೊಂಡ ಜಾಕೆಟ್‌ ತೊಟ್ಟಿದ್ದ ಹತ್ತು ವರ್ಷದ ಬಾಲಕಿಯನ್ನು ಬಂಧಿಸಿ­ರುವ ಆಫ್ಘಾನಿಸ್ತಾನ ಪೊಲೀಸರು, ಬಾಂಬ್‌ ಸ್ಫೋಟಿಸುವ ಉದ್ದೇಶದಿಂದ ಸಹೋದರಿಗೆ ಸ್ಫೋಟಕ ಜಾಕೆಟ್‌ ತೊಡಿಸಿದ್ದ ತಾಲಿಬಾನ್‌ ಕಮಾಂಡರ್‌ಗಾಗಿ ಶೋಧ ನಡೆಸಿದ್ದಾರೆ.ಖಾನಾಶಿನ್ ಜಿಲ್ಲೆಯ ಪೊಲೀಸ್‌ ಚೌಕಿ ಬಳಿ ಸ್ಫೋಟಿಸಿಕೊಳ್ಳುವ ಯತ್ನದಲ್ಲಿ ಇದ್ದ ಬಾಲಕಿ ಸ್ಪೊಜ್ಹಾಮಿ­ಯನ್ನು ಬಂಧಿಸಿ ಬಾಂಬ್‌ನ್ನು ನಿಷ್ಕ್ರಿಯಗೊಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಮಲ ಸೋದರ ಹೇಳಿದಂತೆ ತಾನು ನಡೆದುಕೊಂಡಿದ್ದಾಗಿ ಬಾಲಕಿ ಹೇಳಿದ್ದು ಸೋದರನಿಗಾಗಿ ಶೋಧ ನಡೆದಿದೆ. ಬಾಲಕಿಯು ಸ್ಫೋಟಕ ಗುಂಡಿಯನ್ನು ಒತ್ತಿದಾಗ ಅದು ಕೆಲಸ ಮಾಡಲಿಲ್ಲ. ಇದನ್ನು ಗಮನಿಸಿದ ಪೊಲೀಸರು ಕೂಡಲೆ ಬಾಲಕಿಯನ್ನು ಬಂಧಿಸಿ ಸಂಭವಿಸಲಿದ್ದ  ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry