ಬಾಂಬೆ ಹೌಸ್‌ಗೆ ಬೆಂಕಿ: 3 ಸಾವು

7

ಬಾಂಬೆ ಹೌಸ್‌ಗೆ ಬೆಂಕಿ: 3 ಸಾವು

Published:
Updated:
ಬಾಂಬೆ ಹೌಸ್‌ಗೆ ಬೆಂಕಿ: 3 ಸಾವು

ಮುಂಬೈ (ಪಿಟಿಐ): ದಕ್ಷಿಣ ಮುಂಬೈನಲ್ಲಿ ಟಾಟಾ ಸಮೂಹದ ಕಚೇರಿಗಳನ್ನು ಹೊಂದಿರುವ ಬಾಂಬೆ ಹೌಸ್ ಕಟ್ಟಡದಲ್ಲಿ ಬೆಂಕಿ ಹೊತ್ತಿದ್ದರಿಂದ ಮೂರು ಮಂದಿ ಮೃತಪಟ್ಟಿದ್ದು ಮತ್ತೊಬ್ಬನಿಗೆ ಗಾಯಗಳಾಗಿದೆ. ‘ತೀವ್ರ ಸುಟ್ಟ ಗಾಯಗಳಿಂದ ಮೂರು ಜನರನ್ನು ಸೇಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಅವರು ಮೃತಪಟ್ಟರು’ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಗೊಂಡ ವ್ಯಕ್ತಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಅವರು ಹೇಳಿದ್ದಾರೆ.

 

ಕಟ್ಟಡದ ನೆಲಮಾಳಿಗೆಯಲ್ಲಿ ಬೆಳಿಗ್ಗೆ ಸುಮಾರು 9.20 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗೆ ಕಾರಣ ಮತ್ತು ಇದರಿಂದಾದ ನಷ್ಟವನ್ನು ಇನ್ನೂ ತಿಳಿಯಬೇಕಿದೆ ಎಂದ ಅಧಿಕಾರಿಗಳು ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry