ಬಾಂಬ್‌ ತಯಾರಿಕಾ ಸಾಧನ ವಶ

7
ಯಾಸೀನ್‌ ಗೋವಾದಲ್ಲಿ ತಂಗಿದ್ದ ಮನೆಯಲ್ಲಿ ಪತ್ತೆ

ಬಾಂಬ್‌ ತಯಾರಿಕಾ ಸಾಧನ ವಶ

Published:
Updated:

ಪಣಜಿ (ಪಿಟಿಐ): ಇಂಡಿಯನ್‌ ಮುಜಾ­ಹಿದೀನ್‌ ಉಗ್ರ ಯಾಸೀನ್‌ ಭಟ್ಕಳ ಗೋವಾ ರಾಜ್ಯದ ಅಂಜುನಾ ಗ್ರಾಮದಲ್ಲಿ ಬಾಡಿಗೆಗೆ ಇದ್ದ ಮನೆ­ಯಿಂದ ಬಾಂಬ್‌ ತಯಾರಿಕಾ ಸಾಧನ­ವನ್ನು ರಾಷ್ಟ್ರೀಯ ತನಿಖಾ ತಂಡ ವಶಪಡಿಸಿಕೊಂಡಿದೆ.ಹೋದ ಶನಿವಾರ ಯಾಸೀನ್‌ನನ್ನು ಕರೆತಂದಿದ್ದ ಎನ್‌ಐಎ ಸಿಬ್ಬಂದಿ ಮನೆ  ತಪಾಸಣೆ ಮಾಡಿದಾಗ ಬಾಂಬ್‌ ತಯಾರಿಕೆ ಸಾಧನ ಪತ್ತೆಯಾ­ಯಿತು ಎಂದು ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಬುಧವಾರ ತಿಳಿಸಿದರು.ಯಾಸೀನ್‌ ಮತ್ತು ಆತನ ಸಹ­ಚರರಿಗೆ ಮನೆಯನ್ನು ಬಾಡಿಗೆ ನೀಡಿದ್ದ ಮಾಲೀಕ, ಇದಕ್ಕೆ ಮುನ್ನ ಸುದ್ದಿಸಂಸ್ಥೆ ಜತೆ ಮಾತನಾಡಿ, ಎನ್‌ಐಎ ಸಿಬ್ಬಂದಿ ಕೆಲವು ಆಸಿಡ್‌ ಬಾಟಲಿಗಳು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿ­ಕೊಂ­ಡಿದ್ದರು ಎಂದು ಮಾಹಿತಿ ನೀಡಿದ್ದರು.

ಯಾಸೀನ್‌ ಹಾಗೂ ಇನ್ನಿಬ್ಬರು 2011ರ ನವೆಂಬರ್‌ನಿಂದ 2012ರ ಡಿಸೆಂಬರ್‌ವರೆಗೆ ಈ ಮನೆಯಲ್ಲಿ ಇದ್ದರು. ನಂತರ ಮಾಲೀಕ ಧ್ಯಾನೇ­ಶ್ವರ್‌ ಚಾರಿ ಅವರಿಗೂ ತಿಳಿಸದೆ, ಮನೆ ಖಾಲಿ ಮಾಡಿದ್ದರು.ಯಾಸೀನ್‌ನನ್ನು ಶನಿವಾರ ರಾತ್ರಿ ದೆಹಲಿಯಿಂದ ವಿಮಾನದಲ್ಲಿ ಕರೆ­ತಂದಿದ್ದ ಎನ್‌ಐಎ ಸಿಬ್ಬಂದಿ, ಆತ ಬಾಡಿಗೆ ಇದ್ದ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದರು. ಪಣಜಿ ಹತ್ತಿರದ ಚಿಂಬೆಲ್‌ ಎಂಬ ಕೊಳೆ­ಗೇರಿಗೂ ಭೇಟಿ ನೀಡಿ, ಆಮೇಲೆ ಅದೇ ರಾತ್ರಿ ದೆಹಲಿಗೆ ವಾಪಸ್ಸಾಗಿದ್ದರು.ಇದೇ ವೇಳೆ ಎನ್‌ಐಎ ಚಿಂಬೆಲ್‌ನಲ್ಲಿ ವ್ಯಕ್ತಿಯೊಬ್ಬನನ್ನು ತನಿಖೆ­ಗಾಗಿ ವಶಕ್ಕೆ ತೆಗೆದುಕೊಂಡಿತು. ಯಾಸೀನ್‌ ಬಳಸು­ತ್ತಿದ್ದ ಸೆಕೆಂಡ್‌ ಹ್ಯಾಂಡ್‌ ಬೈಕ್‌ ವಶ­ಪಡಿಸಿಕೊಳ್ಳ­ಲಾ­ಗಿದೆ ಎಂದು ಮೂಲಗಳು ತಿಳಿಸಿವೆ.ಮನೆಯನ್ನು ಬಾಡಿಗೆ ಪಡೆಯುವಾಗ ಯಾಸೀನ್‌ ಎಂಬ ಹೆಸರನ್ನು ಹೇಳಲೇ ಇಲ್ಲ, ಪುಣೆಯ ವಿಳಾಸ ನೀಡಿದ ಬೇರೊಬ್ಬ ಬಾಡಿಗೆ ಒಪ್ಪಂದ ಮಾಡಿಕೊಂಡ, ನಂತರ ಯಾಸೀನ್‌ ಮನೆಗೆ ಬಂದು ಸೇರಿಕೊಂಡ; ಪುಣೆಯ ವಿಳಾಸ ನೀಡಿ ಬಾಡಿಗೆ ಪಡೆದಾತನ ಹೆಸರು ತನಗೆ ನೆನಪಿಲ್ಲ ಎಂದು ಮನೆ ಮಾಲೀಕ ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry