ಶನಿವಾರ, ಅಕ್ಟೋಬರ್ 19, 2019
28 °C

ಬಾಂಬ್ ದಾಳಿ:50 ಬಲಿ

Published:
Updated:

ಬಾಸ್ರಾ, ಇರಾಕ್(ಎಎಫ್‌ಪಿ): ಈ ನಗರದ ಹೊರವಲಯದಲ್ಲಿ  ಶಿಯಾ ಪಂಥದ ಯಾತ್ರಿಕರ  ಮೇಲೆ ಶನಿವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸುಮಾರು 50 ಮಂದಿ ಸತ್ತು, 100ಕ್ಕೂ ಅಧಿಕ ಜನರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.

ಇರಾಕ್‌ನಿಂದ ಅಮೆರಿಕ ಸೇನೆ ವಾಪಸಾದ ಒಂದು ತಿಂಗಳಲ್ಲಿ ಆಡಳಿತಾರೂಢ ಶಿಯಾ ಪಂಗಡದ ಮೇಲೆ ಬಹುಸಂಖ್ಯಾತ ಸುನ್ನಿ ಜನಾಂಗದವರ ದಾಳಿಗಳು ಹೆಚ್ಚಾಗಿವೆ ಎನ್ನಲಾಗಿದೆ.

ದಕ್ಷಿಣ ಇರಾಕ್‌ನಲ್ಲಿರುವ ಕರ್ಬಾಲಾ ಪವಿತ್ರ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಯಾತ್ರಾರ್ಥಿಗಳಿಗೆ ಕೇಕ್ ಹಂಚುತ್ತಾ ಜನರ ನಡುವೆ ಹೋಗಿ ನಿಂತ ದುಷ್ಕರ್ಮಿಯು ತನ್ನನ್ನು ಸ್ಪೋಟಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)