ಬಾಂಬ್ ನಿರೋಧಕ ವಾಹನ ಶವಪೆಟ್ಟಿಗೆ

7

ಬಾಂಬ್ ನಿರೋಧಕ ವಾಹನ ಶವಪೆಟ್ಟಿಗೆ

Published:
Updated:

ನವದೆಹಲಿ, (ಪಿಟಿಐ): ನಕ್ಸಲೀಯರ ಪ್ರಭಾವವಿರುವ ರಾಜ್ಯಗಳಲ್ಲಿ ಸಿಆರ್‌ಪಿಎಫ್ ಯೋಧರು ಬಳಸುತ್ತಿರುವ ನೆಲಬಾಂಬ್ ನಿರೋಧಕ ವಾಹನಗಳು ನಿರೀಕ್ಷಿತ ಫಲಿತಾಂಶ ನೀಡದೆ ಅನೇಕರ ಸಾವು, ನೋವುಗಳಿಗೆ ಕಾರಣವಾಗಿದ್ದು `ಗಾಲಿಗಳ ಮೇಲಿನ ಶವಪೆಟ್ಟಿಗೆ~ಗಳಾಗಿ ಮಾರ್ಪಟ್ಟಿವೆ. ಹೀಗಾಗಿ ಸಿಆರ್‌ಪಿಎಫ್ ಪರ್ಯಾಯ ವಾಹನಗಳಿಗಾಗಿ ಶೋಧ ನಡೆಸಿದೆ.ಕಳೆದ ವರ್ಷ 150ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ, ನಕ್ಸಲೀಯರು ಹುದುಗಿಸಿಟ್ಟ ನೆಲಬಾಂಬ್ ಸ್ಫೋಟಗಳಿಗೆ ಬಲಿಯಾಗಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ನೆಲಬಾಂಬ್ ನಿರೋಧಕ ವಾಹನಗಳೂ ಸ್ಫೋಟಗೊಂಡಿವೆ. ಹೀಗಾಗಿ ಈ ವಾಹನಗಳ ಬಳಕೆಯನ್ನು ಕಡಿಮೆ ಮಾಡುವಂತೆ ಸೂಚಿಸಲಾಗಿದ್ದು, ಕಾಲ್ನಡಿಗೆಯಲ್ಲಿ ಗಸ್ತು ತಿರುಗುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry