ಬಾಂಬ್ ಬೆದರಿಕೆ ಕರೆ: ಐಫೆಲ್ ಗೋಪುರದಿಂದ ಜನರ ತೆರವು

7

ಬಾಂಬ್ ಬೆದರಿಕೆ ಕರೆ: ಐಫೆಲ್ ಗೋಪುರದಿಂದ ಜನರ ತೆರವು

Published:
Updated:
ಬಾಂಬ್ ಬೆದರಿಕೆ ಕರೆ: ಐಫೆಲ್ ಗೋಪುರದಿಂದ ಜನರ ತೆರವು

ಪ್ಯಾರಿಸ್ (ಡಿಪಿಎ): ಅನಾಮಧೇಯರ ಬಾಂಬ್ ಸ್ಫೋಟದ ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಪ್ಯಾರಿಸ್‌ನ ಐಫೆಲ್ ಗೋಪುರ ಮತ್ತು  ಮಾಂಟಾಪರ್‌ನಸ್ಸೆ ಪ್ರವಾಸಿ ಕೇಂದ್ರದಿಂದ ಶುಕ್ರವಾರ ರಾತ್ರಿ ಸಾರ್ವಜನಿಕರನ್ನು ತೆರವು ಗೊಳಿಸಲಾಯಿತು.ಐಫೆಲ್ ಗೋಪುರ ಮತ್ತು ಮಾಂಟಾಪರ್‌ನಸ್ಸೆ ಪ್ರವಾಸಿ ಕೇಂದ್ರದ ಮೇಲೆ ಬಾಂಬ್ ದಾಳಿ ನಡೆಸಲಾಗುವುದು ಎಂಬ 2 ಅನಾಮಧೇಯ ಕರೆಗಳು ಪೊಲೀಸರಿಗೆ ಬಂದವು. ಈ ಹಿನ್ನೆಲೆಯಲ್ಲಿ  ಸುಮಾರು 2000 ಮಂದಿಯ ಸುರಕ್ಷತೆಯ ದೃಷ್ಟಿಯಿಂದ ಜನರನ್ನು ಈ ಎರಡೂ ಸ್ಥಳಗಳಿಂದ ಹೊರಹೋಗುವಂತೆ ಆದೇಶಿಸಲಾಯಿತು.ಸ್ಫೋಟಕ ಸಾಮಗ್ರಿಗಳಿಗಾಗಿ ಐಫೆಲ್ ಗೋಪುರ ಮತ್ತು ಮಾಂಟಾಪರ್‌ನಸ್ಸೆ ಪ್ರವಾಸಿ ಕೇಂದ್ರದಲ್ಲಿ  ಶೋಧ ಕಾರ್ಯ ನಡೆಯಿತು. ಎರಡು  ಗಂಟೆಗಳ ನಂತರ ಮಾಂಟಾಪರ್‌ನಸ್ಸೆ ಪ್ರವಾಸಿ ಕೇಂದ್ರವನ್ನು ತೆರೆಯಲಾಯಿತು. ಆದರೆ ಐಫೆಲ್ ಗೋಪುರದ ಪ್ರವೇಶವನ್ನು ಬಂದ್ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry