ಶುಕ್ರವಾರ, ಅಕ್ಟೋಬರ್ 18, 2019
27 °C

ಬಾಂಬ್ ಸ್ಫೋಟ: ಜಿಲ್ಲಾ ಗವರ್ನರ್ ಬಲಿ

Published:
Updated:

ಕಾಬೂಲ್ (ಎಎಫ್‌ಪಿ): ಆತ್ಮಹತ್ಯಾ ಬಾಂಬ್ ದಾಳಿಕೋರನೊಬ್ಬ ತನ್ನನ್ನೇ ತಾನು ಸ್ಫೋಟಿಸಿಕೊಂಡ ಕಾರಣ ದಕ್ಷಿಣ ಆಫ್ಘಾನಿಸ್ತಾನದಲ್ಲಿ ಜಿಲ್ಲಾ ಗವರ್ನರ್ ಸೇರಿದಂತೆ ಐವರು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.

ಪಂಜ್ವಾಯಿ ಜಿಲ್ಲೆಯ ಗವರ್ನರ್ ಫಜಲುದ್ದೀನ್ ಆಘಾ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಸ್ಫೋಟಕಗಳನ್ನು ತುಂಬಿಸಿಕೊಂಡಿದ್ದ ಆತ್ಮಹತ್ಯಾದಳದ ದಾಳಿಕೋರ ತನ್ನ ಕಾರನ್ನು ಡಿಕ್ಕಿ ಹೊಡೆದ. ಪರಿಣಾಮ ಗವರ್ನರ್ ಅವರ ವಾಹನದಲ್ಲಿದ್ದ ಮತ್ತು ಅವರ ಇಬ್ಬರು ಪುತ್ರರು ಹಾಗೂ ಅಂಗರಕ್ಷಕರು ಸ್ಥಳದಲ್ಲೇ ಮೃತಪಟ್ಟರು. ಘಟನೆಯಲ್ಲಿ 10 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Post Comments (+)