ಬಾಂಬ್ ಸ್ಫೋಟ: ಸಚಿವರು ಪಾರು

7

ಬಾಂಬ್ ಸ್ಫೋಟ: ಸಚಿವರು ಪಾರು

Published:
Updated:

ಕೈರೊ (ಪಿಟಿಐ): ಈಜಿಪ್ಟ್‌ನ ಒಳಾಡಳಿತ ಸಚಿವ ಮೊಹಮದ್ ಇಬ್ರಾಹಿಂ ಅವರು ಬೆಂಗಾವಲಿನಲ್ಲಿ ವಾಹನದಲ್ಲಿ ಸಾಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಬಾಂಬ್ ಎಸೆದಿದ್ದರಿಂದ ಮಗುವೊಂದು ಸೇರಿ ಏಳು ಜನರಿಗೆ ಗಾಯಗಳಾಗಿವೆ. ಈ ಘಟನೆಯಲ್ಲಿ ಸಚಿವರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ.ನಸರ್ ನಗರ ಜಿಲ್ಲೆಯ ಸಚಿವರ ನಿವಾಸ ಬಳಿಯೇ ಈ ಘಟನೆ ನಡೆದಿದೆ. ಕಾರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಲಾಗಿದೆ ಎಂದು ಮೊದಲು ವರದಿಯಾಗಿತ್ತು. ಹತ್ತಿರದ ಕಟ್ಟಡದಿಂದ ಬಾಂಬ್‌ನ್ನು ಎಸೆಯಲಾಗಿದೆ ಎಂದು ನಂತರ ಖಚಿತಪಡಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry