ಸೋಮವಾರ, ಏಪ್ರಿಲ್ 19, 2021
33 °C

ಬಾಂಬ್ ಸ್ಫೋಟ: 24 ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಹೋರ್ (ಪಿಟಿಐ): ಫೈಸಲಾಬಾದ್‌ನಲ್ಲಿರುವ ಐಎಸ್‌ಐ ಕಚೇರಿ ಬಳಿ ಭಾರಿ ಕಾರ್‌ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 20 ಜನರು ಮೃತಪಟ್ಟಿದ್ದು 100 ಮಂದಿ ಗಾಯಗೊಂಡಿದ್ದಾರೆ.ಮಂಗಳವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 11.30ರ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಪ್ರಾದೇಶಿಕ ಪೊಲೀಸ್ ಮುಖ್ಯಸ್ಥ ಆಫ್ತಾಬ್ ಚೀಮಾ ತಿಳಿಸಿದ್ದಾರೆ.ಇಲ್ಲಿನ ಸಿಎನ್‌ಜಿ ಸ್ಟೇಷನ್ ಬಳಿಯ ಕಾರು ನಿಲುಗಡೆ ಸ್ಥಳದಲ್ಲಿ ನಿಲ್ಲಿಸಿದ್ದ ಕಾರ್‌ಬಾಂಬ್ ಸ್ಫೋಟಗೊಂಡಿತು. ಈ ಶಕ್ತಿಶಾಲಿ ಸ್ಫೋಟಕ್ಕೆ ಸಿಎನ್‌ಜಿ ಸ್ಟೇಷನ್ ಕಟ್ಟಡ ಸಂಪೂರ್ಣ ನಾಶವಾಗಿದೆ. ಕಟ್ಟಡದ ಅವಶೇಷಗಳ ಅಡಿ ಸಿಲುಕಿದವರನ್ನು ಹೊರತೆಗೆದು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ13 ಜನರ ಸ್ಥಿತಿ ಗಂಭೀರವಾಗಿದೆ. ಬಾಂಬ್ ತುಂಬಿದ್ದ ಈ ಕಾರನ್ನು ಬೇಕೆಂದೇ ನಿಲ್ಲಿಸಲಾಗಿತ್ತೋ ಇಲ್ಲವೇ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಘಟನೆಗೆ ಯಾವುದೇ ಸಂಘಟನೆ ಅಥವಾ ವ್ಯಕ್ತಿಗಳಾಗಲಿ ಹೊಣೆ ಹೊತ್ತುಕೊಂಡಿಲ್ಲ ಎಂದು ಚೀಮಾ ಹೇಳಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.