ಗುರುವಾರ , ಡಿಸೆಂಬರ್ 12, 2019
26 °C

ಬಾಕ್ಸರ್‌ ನಾರ್ಟನ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಕ್ಸರ್‌ ನಾರ್ಟನ್‌ ನಿಧನ

ಲಾಸ್‌ ವೆಗಾಸ್‌ (ಎಪಿ): ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಹೇವಿವೇಟ್‌ ಚಾಂಪಿಯನ್‌ ಅಮೆರಿಕದ ಕೆನ್‌ ನಾರ್ಟನ್‌ (70) ಬುಧವಾರ ನಿಧನರಾದರು.ನಾರ್ಟನ್‌ 1973ರಲ್ಲಿ ಬಾಕ್ಸಿಂಗ್‌ ದಂತಕತೆ ಮುಹಮ್ಮದ್‌ ಅಲಿಗೆ ಆಘಾತ ನೀಡಿದ್ದರು. ಅಲಿ ಅವರ ದವಡೆಗೆ ಬಲವಾದ ಪೆಟ್ಟು ನೀಡಿದ್ದರು. ಆದರೆ 1976ರಲ್ಲಿ ಭಾರಿ ವಿವಾದಕ್ಕೆ ಒಳಗಾಗಿದ್ದ ಹೋರಾಟ ದಲ್ಲಿ ಅಲಿ ಎದುರು ಪರಾಭವ ಗೊಂಡಿದ್ದರು.‘ನಾರ್ಟನ್‌ ಎರಡು ವರ್ಷಗಳಿಂದ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿ ದ್ದರು. ಒಮ್ಮೆ ಪಾರ್ಶ್ವವಾಯುಗೆ ಒಳಗಾಗಿದ್ದರು’ ಎಂದು ನಾರ್ಟನ್‌ ಅವರ ಮಾಜಿ ಮ್ಯಾನೇಜರ್‌ (ಬ್ಯುಸಿನೆಸ್‌) ಜಿನೆ ಕಿಲ್ರೊಯ್‌ ತಿಳಿಸಿದ್ದಾರೆ.42 ಪೈಪೋಟಿಯಲ್ಲಿ ಗೆಲುವು ಸಾಧಿ­ಸಿದ್ದ ಈ ವೃತ್ತಿಪರ ಬಾಕ್ಸರ್‌ ಹಲವು ದಿಗ್ಗಜರಿಗೆ ಆಘಾತ ನೀಡಿದ್ದರು.

ಪ್ರತಿಕ್ರಿಯಿಸಿ (+)