ಭಾನುವಾರ, ಜೂನ್ 13, 2021
25 °C

ಬಾಕ್ಸಿಂಗ್: ಸೆಮಿಫೈನಲ್‌ಗೆ ಭಾರತದ ಮೂವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಭಾರತದ ಪಿಂಕಿ ಜಂಗ್ರಾ, ಸೋನಿಯಾ ಲಾಥೇರ್ ಹಾಗೂ ಸರಿತಾ ದೇವಿ ಅವರು ಮಂಗೋಲಿಯದ ಉಲಾನ್ಬಾತರ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಯಶಸ್ಸಿನ ಓಟ ಮುಂದುವರಿಸಿದ್ದು, ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.48 ಕೆ.ಜಿ. ವಿಭಾಗದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಪಿಂಕಿ 17-8ರಲ್ಲಿ ಕಜಕಿಸ್ತಾನದ ಡಿನಾ ಇಲ್ಯುಬಯೆವಾ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಿದರು. ಮೊದಲ ಎರಡು ರೌಂಡ್‌ನಲ್ಲಿ 2-2 ಹಾಗೂ 5-5ರಲ್ಲಿ ಸಮಬಲದ ಮುಷ್ಟಿ ಕಾಳಗ ನಡೆಯಿತು. ಡಿನಾಗೆ ಆಘಾತ ನೀಡಿದ ಪಿಂಕಿ ನಾಲ್ಕರ ಘಟ್ಟದಲ್ಲಿ ಚೀನಾದ ಯುಜೀ ಲುವೊ ಅವರನ್ನು ಎದುರಿಸುವರು.ಸೋನಿಯಾ ಅವರು 54 ಕೆ.ಜಿ. ವಿಭಾಗದಲ್ಲಿ 24-5ರಲ್ಲಿ ಶ್ರೀಲಂಕಾದ ವಿಧುಶಿಕಾ ಪ್ರಬಧಿ ಮೊಹೊಟ್ಟ ವಿರುದ್ಧ ಮೇಲುಗೈ ಸಾಧಿಸಿದರು. ಸ್ವರ್ಣ ಪದಕದ ಕನಸು ಕಾಣುತ್ತಿರುವ ಸೋನಿಯಾಗೆ ಸೆಮಿಫೈನಲ್‌ನಲ್ಲಿ ಕಜಕಿಸ್ತಾನದ ಗುಲ್ಜಾನ್ ಅಕಿಮೋವ್ ಪ್ರಬಲ ಸವಾಲಾಗುವ ನಿರೀಕ್ಷೆಯಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.