ಬಾಕ್ಸಿಂಗ್: ಸೆಮಿಫೈನಲ್‌ಗೆ ವಿಕಾಸ್

7

ಬಾಕ್ಸಿಂಗ್: ಸೆಮಿಫೈನಲ್‌ಗೆ ವಿಕಾಸ್

Published:
Updated:

ನವದೆಹಲಿ (ಪಿಟಿಐ): ವಿಕಾಸ್ ಕೃಷ್ಣನ್ ಅವರು ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 69 ಕೆ.ಜಿ. ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು. ಆದರೆ ಭಾರತದ ಇವರು ಮೂವರು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿದರು.ಬುಧವಾರ ನಡೆದ ಎಂಟರಘಟ್ಟದ ಪಂದ್ಯದಲ್ಲಿ ವಿಕಾಸ್ 9-8 ರಲ್ಲಿ ಮಾಲ್ಡೀವ್ಸ್‌ನ ವಾಸಿಲಿ ಬೆಲೋಸ್ ವಿರುದ್ಧ ಪ್ರಯಾಸದ ಗೆಲುವು ಪಡೆದರು. ಶುಕ್ರವಾರ ನಡೆಯುವ ಸೆಮಿಫೈನಲ್‌ನಲ್ಲಿ ಅವರು ಉಕ್ರೇನ್‌ನ ಟರಾಸ್ ಶೆಲೆಸ್ಟುಕ್ ವಿರುದ್ಧ ಸೆಣಸಾಟ ನಡೆಸುವರು.ಭಾರತದ ಇತರ ಸ್ಪರ್ಧಿಗಳಾದ ಎಲ್. ದೇವೇಂದ್ರೊ ಸಿಂಗ್ (49 ಕೆ.ಜಿ), ಮನೋಜ್ ಕುಮಾರ್ (64 ಕೆ.ಜಿ) ಮತ್ತು ಜೈ ಭಗವಾನ್ (60 ಕೆ.ಜಿ) ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry