ಬಾಕ್ಸೈಡ್‌ ಗಣಿಗಾರಿಕೆಗೆ ಅನುಮತಿ ಇಲ್ಲ

7

ಬಾಕ್ಸೈಡ್‌ ಗಣಿಗಾರಿಕೆಗೆ ಅನುಮತಿ ಇಲ್ಲ

Published:
Updated:

ಭುವನೇಶ್ವರ: ಒಡಿಶಾದ ನ್ಯಾಮಗಿರಿ ಬೆಟ್ಟದಲ್ಲಿ ಲಂಡನ್‌ ಮೂಲದ ವೇದಾಂತ ಕಂಪೆನಿಯು ನಡೆಸಲು ಉದ್ದೇಶಿಸಿರುವ ಬಾಕ್ಸೈಟ್‌್ ಗಣಿಗಾ­ರಿಕೆಗೆ ಅನುಮತಿ ನೀಡಲು ಕೇಂದ್ರ ಪರಿಸರ ಸಚಿವಾಲಯ ನಿರಾಕರಿಸಿದೆ.ನ್ಯಾಮಗಿರಿ ಬೆಟ್ಟವು ಬುಡಕಟ್ಟು ಪ್ರಾಬಲ್ಯದ ಕಾಳಹಂಡಿ ಹಾಗೂ ರಾಯಗಡ ಜಿಲ್ಲೆಗಳ ನಡುವೆ ಮೈಚಾಚಿಕೊಂಡಿದೆ.‘ಆದರೆ ಈ ಬೆಳವಣಿಗೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಈ ಎರಡೂ ಜಿಲ್ಲೆಗಳಲ್ಲಿ ಈ ಗಣಿಗಾರಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು’ ಎಂದು ರಾಜ್ಯ ಉಕ್ಕು ಮತ್ತು ಗಣಿ ಖಾತೆ ಸಚಿವ ಆರ್‌.ಕೆ.ಸಿಂಗ್‌ ಹೇಳಿದ್ದಾರೆ.ಸ್ವಾಗತ: ಪರಿಸರ ಸಚಿವಾಲಯದ ನಿರ್ಧಾರವನ್ನು ರಾಜ್ಯ ಕಾಂಗ್ರೆಸ್‌ ಘಟಕ ಸ್ವಾಗತಿಸಿದೆ. ಆದರೆ ಆಡಳಿತಾರೂಢ ಬಿಜೆಡಿ ಮಾತ್ರ ಅಸಮಾಧಾನಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry