ಸೋಮವಾರ, ಮೇ 17, 2021
28 °C

ಬಾಗಲಕೋಟೆ, ಗದಗ ತಂಡಗಳಿಗೆ ಭರ್ಜರಿ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ  ಪ್ರಥಮ ಬಾರಿಗೆ ನಡೆಯುತ್ತಿರುವ ರಾಜ್ಯಮಟ್ಟದ ಕೌಂಟಿ ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ನಡೆದ ಲೀಗ್ ಪಂದ್ಯಗಳಲ್ಲಿ ಬಾಗಲಕೋಟೆ ಮತ್ತು ಗದಗ ತಂಡಗಳು ಭರ್ಜರಿ ಜಯಗಳಿಸಿದವು.ಬೆಳಗಾವಿ ಮತ್ತು ಬಾಗಲಕೋಟೆ ನಡುವೆ ನಡೆದ 3ನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆತಿಥೇಯ ಬಾಗಲಕೋಟೆ ತಂಡವು ನಿಗದಿತ 20 ಒವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 131 ರನ್ ಗಳಿಸಿತು.ಬಾಗಲಕೋಟೆ ತಂಡದ ತೌಸಿಪ್ 24, ಶಂಕರ್ 19, ಸುರೇಶ 15 ರನ್ ಗಳಿಸಿದರು.  ಬೆಳಗಾವಿ ತಂಡದ ರಂಗನಗೌಡ 3 ಮತ್ತು ಅಭಿಲಾಷ್ 2 ವಿಕೆಟ್ ಪಡೆದರು.ಬಳಿಕ ಬ್ಯಾಟಿಂಗ್ ಮಾಡಿದ ಬೆಳಗಾವಿ ತಂಡದ ಗಣೇಶ 49 ಮತ್ತು ಮಂಜುನಾಥ 17 ರನ್ ಗಳಿಸಿದರು. ಒಟ್ಟು 115 ರನ್ ಗಳಿಸಿತು. ಬಾಗಲಕೋಟೆ ತಂಡ 16 ರನ್‌ಗಳಿಂದ ಪಂದ್ಯದಲ್ಲಿ ಗೆಲವು ಸಾಧಿಸಿತು. ಬೆಳಗಾವಿ ತಂಡದ ಗಣೇಶ (49ರನ್) ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.ಗದಗಕ್ಕೆ ಜಯ: ಗದಗ ಮತ್ತು ಬಳ್ಳಾರಿ ನಡುವೆ ಶುಕ್ರವಾರ ನಡೆದ ನಾಲ್ಕನೇ ಲೀಗ್ ಪಂದ್ಯದಲ್ಲಿ ಟಾಸ್ ಗೆದ್ದ ಗದಗ ತಂಡದ ಪರವಾಗಿ ಅಸ್ಲಾಂ ಮುಧೋಳ 52, ಶಿವು ಕರಡಿ 17, ಅಭಿಜಿತ್ ಹುಯಿಲಗೋಳ 21 ಮತ್ತು ಸಂತೋಷ ಜೈನ್ 18(ನಾಟ್ ಔಟ್) ರನ್ ಗಳಿಸಿದರು.ಒಟ್ಟು ನಿಗದಿತ 20 ಒವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 150 ರನ್ ಗಳಿಸಿತು. ಬಳ್ಳಾರಿ ತಂಡದ ರಮೇಶ, ಉಮೇಶ ಅವರು ತಲಾ 2 ವಿಕೆಟ್ ಪಡೆದರು.ಬಳಿಕ ಬ್ಯಾಟಿಂಗ್ ಮಾಡಿದ ಬಳ್ಳಾರಿ ತಂಡ 117 ರನ್ ಗಳಿಸಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಪರವಾಗಿ  ಸಾಗರ್-18, ಉಮೇಶ 34 (ನಾಟ್‌ಔಟ್) ಗಳಿಸಿದರು.ಗದಗದ ಶಿವು ಕರಡಿ 5, ವಿಶ್ವನಾಥ 2 ವಿಕೆಟ್ ಗಳಿಸಿದರು. ಅಸ್ಲಾಂ ಮುಧೋಳ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದುಕೊಂಡರು.ಮೊದಲ ದಿನದ ಪಂದ್ಯ: ಗದಗ ಮತ್ತು ಬಾಗಲಕೋಟೆ ನಡುವೆ ಗುರುವಾರ ನಡೆದ ಆರಂಭಿಕ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗದಗ ತಂಡದ ಶಿವು ಕರಡಿ 93 ಮತ್ತು ಅಸ್ಲಾಂ ಮುಧೋಳ 30 ರನ್ ಗಳಿಸಿದರು. ಒಟ್ಟು 3 ವಿಕೆಟ್ ಕಳೆದುಕೊಂಡು 203 ಬಾರಿ ಮೊತ್ತವನ್ನು ಸೇರಿಸಿತು.ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆತಿಥೇಯ ಬಾಗಲಕೋಟೆ ತಂಡದ ಸುರೇಶ-57 ಮತ್ತು ಮಂಜುನಾಥ 32 ರನ್ ಗಳಿಸಿದರು. ತಂಡ ನಿಗದಿತ 20 ಒವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 147 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಗದಗ ಪರ ಅಸ್ಲಾಂ ಮುಧೋಳ 2 ಮತ್ತು ಶಂಕರ್ 3 ವಿಕೆಟ್ ಕೆಡವಿದರು.  ಶಿವು ಕರಡಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.ಬಳ್ಳಾರಿಗೆ ಭರ್ಜರಿ ಜಯ: ಬಳ್ಳಾರಿ ಮತ್ತು ಬೆಳಗಾವಿ ನಡುವೆ ಗುರುವಾರ ನಡೆದ 2ನೇ ಲೀಗ್ ಪಂದ್ಯದಲ್ಲಿ ಬಳ್ಳಾರಿ ತಂಡಕ್ಕೆ ಭರ್ಜರಿ ಜಯ ದೊರೆಯಿತು.ಮೊದಲು ಬ್ಯಾಟಿಂಗ್ ಮಾಡಿದ ಬಳ್ಳಾರಿ ತಂಡದ ಮನೋಜ್ 23, ರಾಘವೇಂದ್ರ ನಾಯಕ 32, ಸಂತೋಷ ಕುಮಾರ 32 ಮತ್ತು ಸಾಗರ್ 15 ರನ್ ಗಳಿಸಿದರು. 15 ಒವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 148 ರನ್ ಕೂಡಿಹಾಕಿತು.ಬೆಳಗಾವಿ ತಂಡದ ಶ್ರೀಶೈಲ, ಇಸ್ಮಾಯಿಲ್ ತಲಾ 3 ವಿಕೆಟ್ ಗಳಿಸಿದರು.

ಬಳಿಕ ಬ್ಯಾಟಿಂಗ್ ಮಾಡಿದ ಬೆಳಗಾವಿ ತಂಡದ ರಾಘು 6, ಪ್ರವೀಣ 6 ರನ್ ಗಳಿಸಿ ಔಟ್ ಆದರು.  ಕೇವಲ 32 ರನ್ ಗಳಿಸಿ 10 ಒವರ್‌ಗಳಲ್ಲಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಹೀನಾಯವಾಗಿ ಸೋಲೊಪ್ಪಿಕೊಂಡಿತು.  ಬಳ್ಳಾರಿ 116 ರನ್‌ಗ ಬಾರಿ ಜಯ ಗಳಿಸಿತು. ಸಾಗರ್ ಪಂದ್ಯಪುರುಷೋತ್ತಮ ಪ್ರಶಸ್ತಿ ಗಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.