ಸೋಮವಾರ, ಆಗಸ್ಟ್ 19, 2019
23 °C
ಬ್ಯಾಸ್ಕೆಟ್‌ಬಾಲ್

ಬಾಗಲಕೋಟೆ ತಂಡಕ್ಕೆ ಜಯ

Published:
Updated:

ಬೆಂಗಳೂರು: ಬಾಗಲಕೋಟೆ ತಂಡದವರು ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಶನಿವಾರದ ಪಂದ್ಯದಲ್ಲಿ 48-24 ಪಾಯಿಂಟ್‌ಗಳಿಂದ ಚಿತ್ರದುರ್ಗದ ದುರ್ಗನ್ಸ್ ತಂಡದ ಎದುರು ಗೆಲುವು ಪಡೆದರು.ಕಂಠೀರವ ಕ್ರೀಡಾಂಗಣದ ಕೋರ್ಟ್‌ನಲ್ಲಿ ನಡೆದ ಇತರ ಪಂದ್ಯಗಳಲ್ಲಿ ಮಂಗಳೂರು ಕ್ಲಬ್ 48-24ರಲ್ಲಿ ಮೈಸೂರಿನ ಯಂಗ್ ನ್ಯಾಷನಲ್ಸ್ ಮೇಲೂ, ದಾವಣಗೆರೆಯ ಮರ್ಚಂಟ್ಸ್ 41-11ರಲ್ಲಿ ಸಿಜೆಸಿ ವಿರುದ್ಧವೂ, ದಾವಣಗೆರೆಯ ಗ್ರೀನ್ಸ್ 38- 25ರಲ್ಲಿ ಕೋಲಾರದ ಕನಕ ತಂಡದ ಮೇಲೂ, ಕೋಲಾರದ ವೈಎಫ್ ಕ್ಲಬ್ 51-38ರಲ್ಲಿ ಕೆ.ಎಸ್. ಹೆಗ್ಡೆ ತಂಡದ ವಿರುದ್ಧ ವೂ, ವಿಎನ್‌ಎಸ್ ಕ್ಲಬ್ 28-24ರಲ್ಲಿ ವಸಂತನಗರ ಕ್ಲಬ್ ಮೇಲೂ, ಅಪ್ಪಯ್ಯ ಕ್ಲಬ್ 35- 28ರಲ್ಲಿ ಪ್ರೊಟೆಕ್ ಚಾಲೆಂಜರ್ಸ್ ವಿರುದ್ಧವೂ ಜಯ ಸಾಧಿಸಿದರು.

Post Comments (+)