ಬಾಗಲಕೋಟೆ ತಂಡಕ್ಕೆ ವಾಲಿಬಾಲ್ ಪ್ರಶಸ್ತಿ

7

ಬಾಗಲಕೋಟೆ ತಂಡಕ್ಕೆ ವಾಲಿಬಾಲ್ ಪ್ರಶಸ್ತಿ

Published:
Updated:

ತಾಳಿಕೋಟೆ: ಇಲ್ಲಿಯ ಎಸ್.ಕೆ. ಪ್ರೌಢಶಾಲಾ ಮೈದಾನದಲ್ಲಿ ಬುಧವಾರ ಮುಕ್ತಾಯಗೊಂಡ ಬೆಳಗಾವಿ ವಿಭಾಗ ಮಟ್ಟದ ವಾಲಿಬಾಲ್ ಟೂರ್ನಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬಾಗಲಕೋಟೆ ಹಾಗೂ ಬೆಳಗಾವಿ ತಂಡಗಳು ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗ ಪ್ರಶಸ್ತಿ ತಮ್ಮದಾಗಿಸಿಕೊಂಡವು.ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಶಿರಸಿ ಶೈಕ್ಷಣಿಕ ತಂಡ, ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ತಂಡಗಳು ಅಗ್ರಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಮುನ್ನಡೆದವು. ಪ್ರಾಥಮಿಕ ವಿಭಾಗದ ಬಾಲಕಿಯರ ಫೈನಲ್‌ನಲ್ಲಿ ಬೆಳಗಾವಿ ಜಿಲ್ಲಾ ತಂಡ 2-0 ನೇರ ಸೆಟ್ ಅಂತರದಿಂದ ಆತಿಥೇಯ ವಿಜಾಪುರ ತಂಡವನ್ನು ಮಣಿಸಿತು. ಬಾಲಕರ ಫೈನಲ್‌ನಲ್ಲಿ ಬಾಗಲಕೋಟೆ ಜಿಲ್ಲಾ ತಂಡ 2-0 ಸೆಟ್ ಅಂತರದಲ್ಲಿ ಗದಗ ಜಿಲ್ಲಾ ತಂಡವನ್ನು ಮಣಿಸಿತು.ಪ್ರೌಢಶಾಲಾ ಬಾಲಕರ ವಿಭಾಗದ ಫೈನಲ್‌ನಲ್ಲಿ  ಶಿರಸಿ ಶೈಕ್ಷಣಿಕ ಜಿಲ್ಲಾತಂಡವು 2-0 ಸೆಟ್‌ಗಳಿಂದ ಕಾರವಾರ ಜಿಲ್ಲಾ ತಂಡವನ್ನೂ; ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ತಂಡವು 2-0 ಸೆಟ್ ಅಂತರದಿಂದ ಧಾರವಾಡ ತಂಡವನ್ನೂ ಮಣಿಸಿದವು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry