ಬಾಗಿಲು ತೆರೆಯಲು ಅವಕಾಶ ನೀಡದ ಗ್ರಾಮಸ್ಥರು

7

ಬಾಗಿಲು ತೆರೆಯಲು ಅವಕಾಶ ನೀಡದ ಗ್ರಾಮಸ್ಥರು

Published:
Updated:

ಹರಪನಹಳ್ಳಿ: ಗ್ರಾಮಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶದಲ್ಲಿ ನಡೆಯುತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ ಅಂಗಡಿಯನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಜಂಜುಲಿಂಗನಹಳ್ಳಿ ಗ್ರಾಮಸ್ಥರು ಹಾಗೂ ಸ್ತ್ರೀ ಶಕ್ತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಅಂಗಡಿ ಬಾಗಿಲು ತೆರೆಯಲು ಅವಕಾಶ ನೀಡದೇ ಬುಧವಾರ ದಿಢೀರ್ ಪ್ರತಿಭಟನೆ ನಡೆಸಿದರು.ಅಂಗಡಿ ಕಾಂಪೌಂಡಿನ ಬಾಗಿಲಿಗೆ ಹಾಕಿದ್ದ ಬೀಗ ಮುರಿದ ಪ್ರತಿಭಟನಾಕಾರರು ಅಂಗಡಿಯ ಅಂಗಳಕ್ಕೆ ನುಗ್ಗಿದರು. ಇನ್ನೇನು ಅಂಗಡಿಯ ವಸ್ತುಗಳು ಪ್ರತಿಭಟನಾಕಾರರ ಆಕ್ರೋಶಕ್ಕೆ ತುತ್ತಾಗಬೇಕು ಅನ್ನುವಷ್ಟರಲ್ಲಿ ಪೊಲೀಸರ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಮಂಜುನಾಥ ಮಾತನಾಡಿ, ಜನವಸತಿ ಪ್ರದೇಶದ ಮಧ್ಯೆ ಬಾರ್ ಅಂಡ್ ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಿರುವ ಅಬಕಾರಿ ಇಲಾಖೆ ಅಧಿಕಾರಿಗಳ ಕ್ರಮ ಖಂಡನೀಯ. ಹತ್ತಾರು ಹಳ್ಳಿಗಳಿಗೆ ಜಂಬುಲಿಂಗನಹಳ್ಳಿ ಕೇಂದ್ರ ಸ್ಥಾನವಾಗಿರುವುದರಿಂದ ದೂರದ  ಊರಿನಿಂದಲೂ ಇಲ್ಲಿಗೆ ಕುಡಿಯಲು ಬರುತ್ತಾರೆ.

ಹೀಗಾಗಿ ಬೆಳಿಗ್ಗೆ 11ರಿಂದಲೇ ಆರಂಭವಾಗುವ ಬಾರ್್ ಹಾಗೂ ರೆಸ್ಟೋರೆಂಟ್್ ವಹಿವಾಟು ಮಧ್ಯರಾತ್ರಿ 1 ಗಂಟೆಯವರೆಗೂ ಎಗ್ಗಿಲ್ಲದೇ ನಡೆಯುತ್ತಿದೆ. ಅಂಗಡಿಗೆ ಬರುವ ಗಿರಾಕಿಗಳು ಕುಡಿದ ಅಮಲಿನಲ್ಲಿ ಅಶ್ಲೀಲ ಪದ ಬಳಕೆ ಮಾಡುವ ಮೂಲಕ ಏರಿದ ಧ್ವನಿಯಲ್ಲಿ ಮಾತನಾಡುತ್ತಾರೆ. ಇದರಿಂದ ಅಕ್ಕಪಕ್ಕದ ಮನೆ ಸೇರಿದಂತೆ ಊರಿನ ಅರ್ಧ ನಿವಾಸಿಗಳಿಗೆ ತುಂಬಾ ಕಿರಿಕಿರಿಯಾಗುತ್ತಿದೆ. ಅಂಗಡಿ ಪಕ್ಕದಲ್ಲಿರುವ ಕಾಲುವೆಯಲ್ಲಿ ಮಹಿಳೆಯರು ಬಟ್ಟೆ ತೊಳೆಯಲು ಬಂದಾಗಲೂ ಸಹ ಅಂಗಡಿಯ ಗಿರಾಕಿಗಳು ಬೇರೆಯವರ ನೆಪದಲ್ಲಿ ಚುಡಾಯಿಸುತ್ತಾರೆ.

ಹೀಗಾಗಿ ಮಹಿಳೆಯರು ಈ ಕಡೆ ತಲೆಹಾಕದಂತೆ ವಾತಾವರಣ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಸ್ತ್ರೀಶಕ್ತಿ ಸ್ವಸಹಾಯ ಸಂಘದ ಗಿರಿಜಾ ಮಾತನಾಡಿ, ‘ಊರಿನ ಜನರ ನೆಮ್ಮದಿಯನ್ನು ಹಾಳು ಮಾಡಿರುವ ಬಾರ್್ ಅಂಡ್್ ರೆಸ್ಟೋರೆಂಟ್್ ನಮಗೆ ಬೇಕಾಗಿಲ್ಲ. ಮನೆಯ ಮಗ್ಗಲಲ್ಲಿಯೇ ಅಂಗಡಿ ಇರುವುದರಿಂದ ಯುವಕರು ಮದ್ಯದ ಚಟಕ್ಕೆ ಜೋತು ಬಿದ್ದಿದ್ದಾರೆ. ಹೀಗಾಗಿ ಮನೆಯಲ್ಲಿ ವಸ್ತುಗಳುಒಂದೂ ಉಳಿಯದೆ ಕುಡಿತದ

ಚಟಕ್ಕೆ ಹಾಡು ಹಗಲಲ್ಲೇ ಬೇಕಾಬಿಟ್ಟಿಯಾಗಿ ಮಾರಾಟ ಆಗುತ್ತಿವೆ. ಅವೆಲ್ಲವೂ ಸಾಲದಾಗಿ ಈಗ ನಮ್ಮ ಮೈಮೇಲಿನ ಆಭರಣಗಳಿಗೂ ಕುತ್ತು ಬಂದಿದೆ. ಒಂದೆಡೆ ಮನೆಯಲ್ಲಿನ ವಸ್ತುಗಳು ಕುಡಿತಕ್ಕೆ ಕಣ್ಮರೆಯಾದರೆ, ಮತ್ತೊಂದೆಡೆ ಆರೋಗ್ಯದ ಮೇಲೂ ಗಂಭೀರ ಸ್ವರೂಪ ಉಂಟಾಗಿದೆ. ಹೀಗಾಗಿ, ನಮ್ಮ ಕುಟುಂಬದ ನೆಮ್ಮದಿಯನ್ನು ಕೆಡಿಸಿರುವ ಬಾರ್್ ಅಂಡ್್ ರೆಸ್ಟೋರೆಂಟ್್ ಅಂಗಡಿಯನ್ನು ಊರಿಂದ ತೊಲಗಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಮಲ್ಲೇಶ್್, ಮಂಜುನಾಥ, ಕಣಿಮಯ್ಯ, ಬಿ. ಪ್ರಕಾಶ್್, ಸಾಕಮ್ಮ, ಲಕ್ಷ್ಮೀ, ನೇತ್ರಾವತಿ, ರೂಪಾ, ಶಾರದಮ್ಮ, ಅನ್ನಪೂರ್ಣಾ, ಶ್ರುತಿ, ಪಾರಮ್ಮ, ದೇವಮ್ಮ, ರತ್ನಮ್ಮ, ಸ್ತ್ರೀಶಕ್ತಿ ಸಂಘದ

ಜಿ.ವಿಜಯಲಕ್ಷ್ಮೀ, ಸುಮಿತ್ರಮ್ಮ, ಬಸವ್ವ, ರೇಣುಕಾ, ಕೆಂಚಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry