ಶುಕ್ರವಾರ, ಮೇ 14, 2021
30 °C

ಬಾಗುವ ಬದಲು ಬಗ್ಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೇತನ ಮತ್ತಿತರ ಸೌಲಭ್ಯಗಳಿಗೆ ಒತ್ತಾಯಿಸಿ ಪ್ರಶಸ್ತ ಸಮಯದಲ್ಲಿ ಪ್ರತಿಭಟನೆ, ಧರಣಿ, ಉಪವಾಸ, ಮೌಲ್ಯಮಾಪನ  ಬಹಿಷ್ಕಾರದಂತಹ  ಕ್ರಮಗಳನ್ನು ತೆಗೆದುಕೊಂಡು ಲಕ್ಷಾಂತರ ಜನರು ಹಾಗೂ ವಿದ್ಯಾರ್ಥಿಗಳಲ್ಲಿ ಆತಂಕ ಹುಟ್ಟಿಸುವ ಪ್ರಯತ್ನಗಳನ್ನು ಸರ್ಕಾರಿ ನೌಕರರು ಮಾಡುತ್ತಿದ್ದಾರೆ. ಈ ಬೆಳವಣಿಗೆ ಅತ್ಯಂತ ದುರದೃಷ್ಟಕರ.ಸರ್ಕಾರಿ ನೌಕರರ ವೇತನದಲ್ಲಿ ತಾರತಮ್ಯ ಇದೆ. ಆದರೆ ತಾರತಮ್ಯ ಹೋಗಲಾಡಿಸಬೇಕು ಎಂಬ ಬೇಡಿಕೆ ನ್ಯಾಯ ಸಮ್ಮತವೇ ಆಗಿರಬಹುದು. ಆದರೆ ದೇಶದ ಕೋಟ್ಯಂತರ ಜನರಿಗೆ ಒಂದು ಹೊತ್ತಿನ ಅನ್ನಕ್ಕೂ ಗತಿ ಇಲ್ಲ. ಈ ವರ್ಷ ರಾಜ್ಯದಲ್ಲಿ ಬರಗಾಲವಿದೆ. ಜನರಿಗೆ ಕುಡಿಯುವ ನೀರು ಕೊಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಇಂತಹ ಸಂದರ್ಭದಲ್ಲಿ ಯಾರೇ ಆಗಲಿ ಮುಷ್ಕರದ ಮಾರ್ಗ ಹಿಡಿಯುವುದು ಸಮರ್ಥನೀಯ ಅಲ್ಲ.ರಾಜ್ಯ ಸರ್ಕಾರ ನೌಕರರ ಇಂತಹ ಮುಷ್ಕರಗಳಿಗೆ ಬೆಲೆ ಕೊಡಬಾರದು ಮತ್ತು ಅವರ ಹೋರಾಟಕ್ಕೆ ಸರ್ಕಾರ ತಾನೇ ಬಾಗುವುದನ್ನು  ಮಾಡದೇ ಬಗ್ಗು ಬಡಿಯುವ ಕ್ರಮಗಳನ್ನು ಜರುಗಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.