ಬಾಗೇಪಲ್ಲಿ: ಛಾವಣಿ ಕುಸಿದು ಐವರ ಸಾವು

7

ಬಾಗೇಪಲ್ಲಿ: ಛಾವಣಿ ಕುಸಿದು ಐವರ ಸಾವು

Published:
Updated:

ಬಾಗೇಪಲ್ಲಿ:  ನೆರಳು ಪಡೆಯಲು ನಿಂತಿದ್ದ ಛಾವಣಿ ಕುಸಿದು ಐವರು ಮೃತಪಟ್ಟು, ಒಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ತಾಲ್ಲೂಕಿನ ಚಾಕವೇಲು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.ತಾಲ್ಲೂಕಿನ ವೆಂಕಟರೆಡ್ಡಪಲ್ಲಿ ತಾಂಡಾದ ಈಶ್ವರಮ್ಮ (26), ಮಗ ಹರ್ಷವರ್ಧನ (5) ಹಾಗೂ ವೆಂಕಟೇಶಪಲ್ಲಿ ಗ್ರಾಮದ ವೆಂಕಟರಾಯಪ್ಪ (45) ಸ್ಥಳದಲ್ಲೇ ಮೃತಪಟ್ಟರೆ, ಲಕ್ಷ್ಮಿದೇವಿ (35) ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಹಾಗೂ ವೆಂಕಟರೆಡ್ಡಪಲ್ಲಿ ತಾಂಡಾದ ರಾಜಮ್ಮ (35) ಚಿಂತಾಮಣಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪಾಪುಲಮ್ಮ ಎಂಬಾಕೆ ತೀವ್ರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಹಿನ್ನೆಲೆ: ಚೇಳೂರಿಗೆ ತೆರಳಲು ಚಾಕವೇಲು ಗ್ರಾಮದ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದವರು, ನಿಗದಿತ ಸಮಯಕ್ಕೆ ಬಸ್ ಬಾರದಿದ್ದಾಗ ಪಕ್ಕದಲ್ಲೇ ಇದ್ದ ಖಾಸಗಿ ವ್ಯಕ್ತಿಗಳು ನಿರ್ಮಿಸಿದ್ದ ಛಾವಣಿಯೊಂದರ ನೆರಳಿನಲ್ಲಿ ನಿಂತಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ಛಾವಣಿ ಕುಸಿದಿದೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry