ಬಾಗೋಡಿ: ರೋಮಾಂಚಕ ಜಾತ್ರೆಗೆ ತೆರೆ

ಭಾನುವಾರ, ಜೂಲೈ 21, 2019
27 °C

ಬಾಗೋಡಿ: ರೋಮಾಂಚಕ ಜಾತ್ರೆಗೆ ತೆರೆ

Published:
Updated:

ಶಹಾಬಾದ: ಸುಮಾರು ಮೂರು ಅಡಿ ಉದ್ದದ ಹಿತ್ತಾಳೆ ತಂತಿಗಳನ್ನು ಬಾಯಲ್ಲಿ ತೂರಿಸಿ, ಆದರ ಜೊತೆಗೆ ಮೊಳ ಉದ್ದದ ದಾರ ಹಾಕಿ ಎಳೆಯುವ ಚಿತ್ತಾಪುರ ತಾಲ್ಲೂಕಿನ ಸುಪ್ರಸಿದ್ಧ ಬಾಗೋಡಿ

ಗ್ರಾಮದ ಶ್ರೀರೇವಣಸಿದ್ದೇಶ್ವರ ರೋಮಾಂಚಕಾರಿ ಜಾತ್ರಾ ಮಹೋತ್ಸಕ್ಕೆ ಬುಧವಾರ ಸಡಗರ, ಸಂಭ್ರಮದ ತೆರೆ ಕಂಡಿತು.ಬಾದಾಮಿ ಅಮವಾಸ್ಯೆ ನಿಮಿತ್ತ ನಡೆಯುವ ಈ ರೋಮಾಂಚಕಾರಿ ಜಾತ್ರೆಗೆ ನಾಡಿನ ವಿವಿಧ ಕಡೆಯಿಂದ ಬಂದು ಭಕ್ತರು ಹರಕೆ ತೀರಿಸುವುದು ವಾಡಿಕೆ. ಈ ಬಾರಿಯ ಜಾತ್ರೆಯಲ್ಲಿ ಶಹಾಬಾದನ ಶರಣಯ್ಯಸ್ವಾಮಿ ಸೇಡಂ ಸುಮಾರು ಎರಡು ಸಾವಿರ ಉದ್ದದ ದಾರವನ್ನು ತಂತಿ ಮೂಲಕ ಬಾಯಲ್ಲಿ ಹಾಕಿ ಎಳೆದು ಹರಕೆ ತೀರಿಸಿದ್ದು ವಿಶೇಷವಾಗಿತ್ತು. ಬೆಳಗ್ಗೆ ಪುರವಂತರ ವೇಶ, ವಿವಿಧ ವಾದ್ಯ, ಹಿಮ್ಮೇಳಗಳ ಜೊತೆ ರೇವಣಸಿದ್ದೇಶ್ವರ ಮೂರ್ತಿಯನ್ನು ಕಾಗಿನಾ ನದಿಗೆ ಗಂಗಾಸ್ಥಳಕ್ಕೆ ತೆಗೆದುಕೊಂಡು ಹೋಗಲಾಯಿತು. ನಂತರ ಮೆರವಣಿಗೆ ಮತ್ತಿತರ

ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದಾರ ಹಾಕಿ ಎಳೆಯುವ ಕಾರ್ಯಕ್ರಮದಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ಗ್ರಾಮದ ಗಣ್ಯರಾದ ಬಸವರಾಜ ಪಾಟೀಲ, ದಳಪತಿ ಶಿವಲಿಂಗಪ್ಪ ಮಾಲಿಪಾಟೀಲ, ನಾಗೇಂದ್ರ ಕಲಶೆಟ್ಟಿ, ನಾಗಯ್ಯಸ್ವಾಮಿ ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry