ಶನಿವಾರ, ನವೆಂಬರ್ 16, 2019
21 °C

ಬಾಗ್ದಾದ್‌ನಲ್ಲಿ ಬಾಂಬ್ ಸ್ಫೋಟ: 27 ಸಾವು

Published:
Updated:

ಬಾಗ್ದಾದ್ (ಎಎಫ್‌ಪಿ): ಅಮೆರಿಕ ಸೇನಾಪಡೆಯನ್ನು ಹಿಂದಕ್ಕೆ ಪಡೆದ ನಂತರ ನಡೆಯುತ್ತಿರುವ ಮೊದಲ ಚುನಾವಣೆಯ ಹೊಸ್ತಿಲಲ್ಲಿ ಇರಾಕ್‌ನಲ್ಲಿ ಹಿಂಸಾಚಾರ ಹೆಚ್ಚುತ್ತಿದ್ದು, ಪಶ್ಚಿಮ ಬಾಗ್ದಾದ್‌ನ ಉಪನಗರವಾದ ಅಮ್ರಿಯಾದಲ್ಲಿರುವ ಸಣ್ಣ ಮಾರುಕಟ್ಟೆ ಸಂಕೀರ್ಣವೊಂದರಲ್ಲಿ ಗುರುವಾರ ತಡರಾತ್ರಿ ಯುವಕನೊಬ್ಬ ಸ್ಫೋಟಿಸಿದ ಬಾಂಬ್ ದಾಳಿಗೆ 27 ಜನರು ಮೃತಪಟ್ಟು 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.ಮಾರುಕಟ್ಟೆ ಸಂಕೀರ್ಣದ ಮೊದಲ ಮಹಡಿಯಲ್ಲಿರುವ ದುಬೈ ಕೆಫೆ ಮಳಿಗೆಯಲ್ಲಿ ಈ ಸ್ಫೋಟ ಸಂಭವಿಸಿದ್ದು, ಈ ವೇಳೆ ಅಕ್ಕಪಕ್ಕದ ಉಪಹಾರ ಗೃಹ ಹಾಗೂ ಬಟ್ಟೆ ಮಳಿಗೆಗಳು ಜನರು ಅಧಿಕ ಜನರಿಂದ ತುಂಬಿದ್ದವು ಎನ್ನಲಾಗಿದೆ. ಮೃತಪಟ್ಟವರಲ್ಲಿ ಮೂವರು ಮಕ್ಕಳು ಹಾಗೂ ಓರ್ವ ಮಹಿಳೆಯು ಸೇರಿದ್ದಾಳೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದರು.ದುಬೈ ಕೆಫೆಯಲ್ಲಿ ವಿಡಿಯೋ ಗೆಮ್ಸ ಹಾಗೂ ಬಿಲಿಯರ್ಡ್ಸ್ ಆಟದ ವ್ಯವಸ್ಯೆ ಇದ್ದು ಬಿಲಿಯರ್ಡ್ಸ್ ಆಡಲು ಬಂದ ಯುವಕನೋರ್ವ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಇವರೆಗೆ ಯಾವುದೇ ಉಗ್ರರ ಸಂಘಟನೆ ಈ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ.ಈ ದಾಳಿಯು ಭಾನುವಾರ ನಡೆಯುವ ಪ್ರಾಂತೀಯ ಚುನಾವಣೆಯ ವಿಶ್ವಾಸಾರ್ಹತೆ ಕುರಿತಂತೆ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಲವು ರಾಜಕೀಯ ಬಿಕ್ಕಟ್ಟುಗಳ ನಡುವೆ  ನಡೆಯುತ್ತಿರುವ ಈ ಚುನಾವಣೆಯಲ್ಲಿ ಈಗಾಗಲೇ 14 ಅಭ್ಯರ್ಥಿಗಳು ಹತ್ಯೆಗೀಡಾಗಿದ್ದಾರೆ.ಒಂದೇಡೆ ಈ ಚುನಾವಣೆಗಳು ಇರಾಕ್‌ನ ಸ್ಥಿರತೆ ಹಾಗೂ ಭದ್ರತೆ ಕುರಿತಾದ ಪ್ರಮುಖ ಪರೀಕ್ಷೆಯಂತೆ ಕಾಣಿಸುತ್ತಿವೆ. ಮತ್ತೊಂದೇಡೆ ರಾಷ್ಟ್ರೀಯ ಒಕ್ಕೂಟ ಸರ್ಕಾರದೊಂದಿಗೆ ಆಂತರಿಕ ಸಂಘರ್ಷಕ್ಕಿಳಿದಿರುವ ಪ್ರಧಾನಿ ನೂರಿ ಅಲ್-ಮಲ್ಲಿಕ್ ಅವರ ಜನಪ್ರಿಯತೆ ಈ ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಅನುಕೂಲಕರವಾಗಿದೆ ಎನ್ನಲಾಗಿದೆ.

ಪ್ರತಿಕ್ರಿಯಿಸಿ (+)