ಮಂಗಳವಾರ, ಆಗಸ್ಟ್ 20, 2019
27 °C

ಬಾಡಿಗೆ ತಾಯ್ತನ: ಮಸೂದೆ ಸಿದ್ಧ

Published:
Updated:

ನವದೆಹಲಿ (ಪಿಟಿಐ): ಬಾಡಿಗೆ ತಾಯಿಯಾಗಲು ಸಿದ್ಧವಿರುವ ಮಹಿಳೆಯು ತನ್ನ ಸ್ವಂತ ಮಗು ಸೇರಿದಂತೆ ಮೂರಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಲು ಇನ್ನು ಅವಕಾಶವಿಲ್ಲ. ಇದಲ್ಲದೇ ಎರಡು ಹೆರಿಗೆಗಳ ಮಧ್ಯೆ ಕನಿಷ್ಠ ಎರಡು ವರ್ಷ ಅಂತರ ಇರಲೇಬೇಕು.ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಲಾದ `ಸಂತಾನೋತ್ಪತ್ತಿ ನೆರವು ತಂತ್ರಜ್ಞಾನ' (ಎಆರ್‌ಟಿ) ಮಸೂದೆಯಲ್ಲಿ ಅಳವಡಿಸಲಾದ ಕೆಲ ಪ್ರಮುಖ ಭಾಗಗಳು ಇವು.ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಇಂಥದೊಂದು ಮಸೂದೆ ಸಿದ್ಧಪಡಿಸಲಾಗಿದೆ. ಅನಿಯಂತ್ರಿತ ಎಆರ್‌ಟಿ ಕ್ಲಿನಿಕ್‌ಗಳ ಮೆಲೆ ನಿಗಾ ಇಡುವುದು, ಬಾಡಿಗೆ ತಾಯ್ತನದ ವಾಣಿಜ್ಯಿಕ ಬಳಕೆಗೆ ತಡೆ, ಬಾಡಿಗೆ ತಾಯಂದಿರ ಹಿತಾಸಕ್ತಿ ಹಾಗೂ ಈ ವಿಧಾನದಲ್ಲಿ ಜನಿಸುವ ಮಗುವಿನ ರಕ್ಷಣೆಯ ಹಲವು ಉದ್ದೇಶಗಳು ಮಸೂದೆಯಲ್ಲಿವೆ.ದೇಶದಾದ್ಯಂತ ಎಆರ್‌ಟಿ ಕ್ಲಿನಿಕ್‌ಗಳು ನೀಡುತ್ತಿರುವ ಸೇವೆ ಮೇಲೆ ನಿಗಾ ಇಡಲು ಸದ್ಯ ಯಾವುದೇ ವ್ಯವಸ್ಥೆ ಇಲ್ಲ. ಆದರೆ ಈಗ ಸಿದ್ಧಪಡಿಸಿರುವ ಮಸೂದೆಯು, 21ರಿಂದ 35 ವರ್ಷದೊಳಗಿನ ಮಹಿಳೆಯರು ಮಾತ್ರ ಬಾಡಿಗೆ ತಾಯಂದಿರಾಗಲು ಅವಕಾಶ ಕಲ್ಪಿಸಿದೆ.

Post Comments (+)