ಬುಧವಾರ, ನವೆಂಬರ್ 13, 2019
23 °C

ಬಾಡಿಗೆ ಬಾಕಿ: 21 ಮಳಿಗೆಗಳಿಗೆ ಬೀಗ

Published:
Updated:

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿರ್ಮಿಸಿರುವ ಇಂದಿರಾನಗರದ ವಾಣಿಜ್ಯ ಸಮುಚ್ಚಯದಲ್ಲಿ ಹಂಚಿಕೆ ಪಡೆದು ಬಾಡಿಗೆ ಹಣವನ್ನು ಪಾವತಿಸದ 21 ಮಳಿಗೆಗಳಿಗೆ ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿಗಳು ಬುಧವಾರ ಬೀಗ ಹಾಕಿದರು.ಸುಮಾರು 3-4 ವರ್ಷಗಳಿಂದ ಪ್ರಾಧಿಕಾರಕ್ಕೆ ಬಾಡಿಗೆ ಪಾವತಿಸದೆ ಬಾಕಿ ಉಳಿಸಿಕೊಂಡ ಹಂಚಿಕೆದಾರರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಸೂಕ್ತವಾಗಿ ಪ್ರತಿಸ್ಪಂದಿಸದ ಕಾರಣ ಅಂತಿಮ ನೋಟಿಸ್ ನೀಡಿ ಬೀಗ ಹಾಕಲಾಯಿತು. ಈ ಮಳಿಗೆಗಳ ಹಂಚಿಕೆದಾರರು ಪ್ರಾಧಿಕಾರಕ್ಕೆ ರೂ.1 ಕೋಟಿ ಬಾಡಿಗೆ ಉಳಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)