ಬುಧವಾರ, ನವೆಂಬರ್ 13, 2019
23 °C

ಬಾಡೂಟ ಸ್ಥಳದ ಮೇಲೆ ದಾಳಿ

Published:
Updated:

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಶವಂತಪುರ ಕ್ಷೇತ್ರದ ಮಾರಣ್ಣ ಲೇಔಟ್ ಮತ್ತು ಕರಿಹೋಬನಹಳ್ಳಿಯಲ್ಲಿ ಭಾನುವಾರ ಬಾಡೂಟ ಆಯೋಜಿಸಿದ್ದ ಸ್ಥಳದ ಮೇಲೆ ದಾಳಿ ನಡೆಸಿದ ಪೀಣ್ಯ ಪೊಲೀಸರು ಆಹಾರ ಪದಾರ್ಥಗಳು, ಪಾತ್ರೆ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.`ಮಾರಣ್ಣ ಲೇಔಟ್ ಮತ್ತು ಕರಿಹೋಬನಹಳ್ಳಿಯಲ್ಲಿ ಎರಡು ಸಾವಿರ ಮಂದಿಗೆ ಬಾಡೂಟ ಆಯೋಜಿಸಲಾಗಿತ್ತು. ಈ ಬಗ್ಗೆ ಚುನಾವಣಾಧಿಕಾರಿಗಳು ಠಾಣೆಗೆ ಮಾಹಿತಿ ನೀಡಿದರು. ಈ ಮಾಹಿತಿ ಆಧರಿಸಿ ಚುನಾವಣಾಧಿಕಾರಿಗಳೊಂದಿಗೆ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಆ ಸ್ಥಳಗಳ ಮೇಲೆ ದಾಳಿ ನಡೆಸಿ, ಆಹಾರ ಪದಾರ್ಥಗಳು ಹಾಗೂ ಪಾತ್ರೆಗಳನ್ನು ಜಪ್ತಿ ಮಾಡಲಾಯಿತು' ಎಂದು ಪೀಣ್ಯ ಪೊಲೀಸರು ತಿಳಿಸಿದ್ದಾರೆ.`ಜೆಡಿಎಸ್ ಕಾರ್ಯಕರ್ತರು ಬಾಡೂಟ ಆಯೋಜಿಸಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಸಂಬಂಧ ಯಾರನ್ನೂ ಬಂಧಿಸಿಲ್ಲ' ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)