ಶುಕ್ರವಾರ, ನವೆಂಬರ್ 15, 2019
22 °C

ಬಾಣಂತಿ ಸಾವು ತಡೆಗಟ್ಟಲು ಕ್ರಮ

Published:
Updated:

ಗುವಾಹಟಿ (ಪಿಟಿಐ): ಈಶಾನ್ಯ ಭಾರತದಲ್ಲಿ ಬಾಣಂತಿ ಸಾವಿನ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ಪ್ರಸೂತಿ ತಜ್ಞರ ಸಂಘಗಳ ಒಕ್ಕೂಟ (ಎಫ್‌ಒಜಿಎಸ್‌ಐ) ಈಶಾನ್ಯದ ರಾಜ್ಯಗಳಲ್ಲಿ ಹೊಸ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿದೆ.ಯುವ ಪ್ರಸೂತಿ ತಜ್ಞರು, ಆರೋಗ್ಯ ಕಾರ್ಯಕರ್ತರು, ಸಾಫ್ಟ್ ನರ್ಸ್‌ಗಳು ಮತ್ತು ವೈದ್ಯಕೀಯ ಅಧಿಕಾರಿಗಳಿಗೆ ತರಬೇತಿ ನೀಡುವುದು ಮತ್ತು ಮಿಡ್‌ವೈಫ್ ಪದ್ಧತಿಗೆ ಮತ್ತೆ ಚಾಲನೆ ನೀಡುವುದು ಇದರಲ್ಲಿ ಸೇರಿದೆ ಎಂದು `ಎಫ್‌ಒಜಿಎಸ್‌ಐ' ಅಧ್ಯಕ್ಷೆ ಬೆಂಗಳೂರು ಮೂಲದ ವೈದ್ಯೆ ಡಾ. ಹೇಮಾ ದಿವಾಕರ್ ಹೇಳಿದ್ದಾರೆ.`ನಾಳಿನತ್ತ ಯುವಜನರುರು' ಎಂಬ ಈ ಕಾರ್ಯಕ್ರಮದ ಅಡಿ ಈಶಾನ್ಯದ 7 ರಾಜ್ಯಗಳ ಯುವ ಪ್ರಸೂತಿತಜ್ಞರಿಗೆ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿ ವಿವಿಧ ವಿಭಾಗಗಳಲ್ಲಿ ಪರಿಣತಿ ಸಾಧಿಸುವಂತೆ ತರಬೇತಿ ನೀಡಲಾಗುವುದು ಎಂದು ಡಾ. ಹೇಮಾ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)