ಬಾಣಸಿಗರ ಪಾಕೋತ್ಸಾಹ!

7

ಬಾಣಸಿಗರ ಪಾಕೋತ್ಸಾಹ!

Published:
Updated:

ಎಗ್ ಬೆನೆಡಿಕ್ಟ್ ಇಂಗ್ಲಿಷರ ಜನಪ್ರಿಯ ಆಹಾರ. ಮೆದುವಾಗಿ ನಾದಿದ ಹಿಟ್ಟು ಹಾಗೂ ಬೆಣ್ಣೆಯ ಲೇಪವನ್ನು ಒಳಗೊಂಡಿರುವ ಈ ತಿನಿಸಿನ ಮೇಲ್ಭಾಗವನ್ನು ಮೊಟ್ಟೆಯ ಒಳಗಿರುವ ಬಿಳಿಭಾಗವನ್ನು ತೆಗೆದು ಕೇವಲ ಹಳದಿ ಭಾಗದಿಂದ ಅಲಂಕರಿಸಲಾಗುತ್ತದೆ. ಓವನ್‌ನಲ್ಲಿ ಕೆಲವೇ ನಿಮಿಷದಲ್ಲಿ ತಯಾರಿಸಬಹುದಾದ ಈ ತಿನಿಸನ್ನು ಹಾಲೆಂಡ್‌ಸಾಸ್‌ನಲ್ಲಿ ಅದ್ದಿ ತಿಂದರೇ ನಾಲಗೆಯ ಮೇಲೆ ರುಚಿಯ ಟಿಸಿಲೊಡೆಯುತ್ತದೆ.ನಗರದ ಐಷಾರಾಮಿ ಹೋಟೆಲ್‌ಗಳ ಬಾಣಸಿಗರೆಲ್ಲರೂ ಆವತ್ತು ಲೀಲಾ ಪ್ಯಾಲೇಸ್‌ನಲ್ಲಿ ಸೇರಿದ್ದರು. ಎಲ್ಲ ಬಾಣಸಿಗರಿಗೂ ಓಲ್ಡ್ ಇಂಗ್ಲಿಷ್ ಡಿಶ್ ಆದ ಎಗ್ ಬೆನೆಡಿಕ್ಟ್ ತಯಾರಿಸುವ ಸವಾಲು ಒಡ್ಡಲಾಗಿತ್ತು. ಕೇವಲ ಮೊಟ್ಟೆ, ಬೆಣ್ಣೆ, ಸುವಾಸನೆಯುಕ್ತ ಬಾಸಿಲ್ಸ್ ಎಲೆಗಳನ್ನು ಬಳಸಿಕೊಂಡು ಸ್ವಾದಿಷ್ಟ ಹಾಗೂ ರುಚಿಕರ ಬೆನೆಡಿಕ್ಟ್ ತಯಾರಿಸಬೇಕಿದ್ದು ಅವರ ಮುಂದಿದ್ದ ಸವಾಲು. ಗೆದ್ದವರಿಗೆ `ಕಿಂಗ್ ಆಫ್ ಶೆಫ್~ ಎಂಬ ಗೌರವದ ಮುಕುಟ.ಅದು ಕಿಂಗ್‌ಫಿಷರ್ ಪ್ರೀಮಿಯಂ ಹಾಗೂ ಎಪ್ಲೋಸಿಟಿ ಆಯೋಜಿಸಿದ್ದ  `ದಿ ಕಿಂಗ್‌ಫಿಷರ್ ಎಪ್ಲೋಸಿಟಿ ರೆಸ್ಟೊರೆಂಟ್ ವೀಕ್~ನ ಚಾಲನ ಸಮಾರಂಭ. ಅಲ್ಲಿ ತಮ್ಮ ಪಾಕ ಕೌಶಲ್ಯವನ್ನು ಜಾಹೀರುಗೊಳಿಸುವ ಸಲುವಾಗಿ 16 ಬಾಣಸಿಗರು ಸರ್ವ ಸನ್ನದ್ಧರಾಗಿದ್ದರು. ತಮ್ಮ ಕೈರುಚಿಯನ್ನು ಎಲ್ಲರಿಗೂ ತೋರಿಸುವುದರ ಜತೆಗೆ `ಕಿಂಗ್ ಆಫ್ ಶೆಫ್~ ಬಿರುದುಗೆ ಸೆಣಸಲು ಕೂಡ ರೆಡಿಯಾಗಿದ್ದರು.ಯಾರು ಎಷ್ಟು ಬೇಗ, ಎಷ್ಟು ರುಚಿಯಾಗಿ ತಯಾರು ಮಾಡುತ್ತಾರೆ ಎಂಬುದನ್ನು ಪರೀಕ್ಷಿಸಲು ಸೆಲೆಬ್ರಿಟಿ ಶೆಫ್‌ಗಳಾದ ಕರಣ್ ಆನಂದ್ ಮತ್ತು ಅಭಿಜಿತ್ ಸಾಹಾ ಜತೆಗೆ ಇನ್ನಿತರ ಐದು ಮಂದಿ ಫುಡ್‌ಕ್ರಿಟಿಕ್‌ಗಳು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಬಾಣಸಿಗರಲ್ಲಿ ಯಾರು ಶ್ರೇಷ್ಠರು ಎಂದು ಅಳೆಯಲು ಇವರು ಮೂರು ಅಳತೆಗೋಲು ಇರಿಸಿಕೊಂಡಿದ್ದರು. ಬಾಣಸಿಗರ ತಾಂತ್ರಿಕ ಜ್ಞಾನ, ಹೊಸ ಆಲೋಚನೆ ಹಾಗೂ ಅವರ ಕೈ ರುಚಿ. ಭಾಗವಹಿಸಿದ್ದವರೆಲ್ಲರೂ ತಜ್ಞ ಬಾಣಸಿಗರೇ ಆಗಿದ್ದರಿಂದ ಸ್ಪರ್ಧೆ ಕಠಿಣವಾಗಿತ್ತು. ಆದರೂ ಎಲ್ಲರೂ ಪಾಕೋತ್ಸಾಹದಿಂದಲೇ ಪಾಲ್ಗೊಂಡಿದ್ದರು. ಕೊನೆಯಲ್ಲಿ ಇಸ್ಟಾ ಹೋಟೆಲ್‌ಬಾಣಸಿಗ ಸಂದೀಪ್ ಬಿಸ್ವಾಸ್ ಕಿಂಗ್ ಆಫ್ ಶೆಫ್ ಗೌರವವನ್ನು ತಮ್ಮದಾಗಿಸಿಕೊಂಡರು.ಬೆಂಗಳೂರಿಗರು ಭೋಜನ ಪ್ರಿಯರು. ವಿಶ್ವದ ಎಲ್ಲ ಬಗೆಯ ತಿನಿಸುಗಳ ರುಚಿಯನ್ನು ಸವಿಯ ಬೇಕು ಎಂಬ ಆಸೆಯುಳ್ಳವರು. ಹಾಗಾಗಿಯೇ ಇಲ್ಲಿ ವಿಶ್ವದ ಎಲ್ಲ ಬಗೆಯ ತಿನಿಸುಗಳನ್ನು ಉಣಿಸುವ ಸಲುವಾಗಿ ಕಿಂಗ್‌ಫಿಷರ್ ಪ್ರೀಮಿಯಂ 10 ದಿನದ ರೆಸ್ಟೋರೆಂಟ್ ವೀಕ್ ಆಯೋಜಿಸಿದೆ. ಇದು ಮಾರ್ಚ್ 4ರವರೆಗೆ ಆಯ್ದ 100 ರೆಸ್ಟೋರೆಂಟ್‌ಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಆಹಾರಪ್ರಿಯರು ತಮಗಿಷ್ಟವಾದ ಆಹಾರವನ್ನು ಸವಿಯಬಹುದು.ಈ ಸಂದರ್ಭದಲ್ಲಿ ರೆಸ್ಟೊರೆಂಟ್‌ಗಳ ಬಾಣಸಿಗರು ವಿಶ್ವದ ಎಲ್ಲ ಬಗೆಯ ತಿನಿಸುಗಳನ್ನು ಉಣಬಡಿಸಲಿದ್ದಾರೆ. ಇದಕ್ಕೆಂದೇ ವಿಶೇಷ ಮೆನು ಕೂಡ ಸಿದ್ಧಪಡಿಸಲಾಗಿದೆ. ಕೆಲವು ರೆಸ್ಟೊರಾಗಳು ಶೇ 20 ರಿಯಾಯಿತಿ ಕೂಡ ಪ್ರಕಟಿಸಿವೆ. ಊಟದ ಜತೆಗೆ ಭಕ್ಷ್ಯಪ್ರಿಯರು ಮನರಂಜನೆ ಜತೆಗೆ ಆಕರ್ಷಕ ಬಹುಮಾನಗಳನ್ನು ಕೂಡ ಗೆಲ್ಲಬಹುದು. ಲಕ್ಷ ಲಕ್ಷ ಹಣ, ಊಟದ ಉಚಿತ ವೋಚರ್‌ಗಳು, ಪಿವಿಆರ್‌ನಲ್ಲಿ ಸಿನಿಮಾ ನೋಡುವ ಅವಕಾಶ ಲಭ್ಯವಿದೆ. ಮತ್ಯಾಕೆ ತಡ ತಮಗಿಷ್ಟವಾದ ಆಹಾರವನ್ನು ಸವಿಯಲು ಈಗಲೇ ಟೇಬಲ್ ಬುಕ್ ಮಾಡಿ.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry