ಸೋಮವಾರ, ನವೆಂಬರ್ 18, 2019
20 °C

ಬಾಣಾವರ: ಗ್ರಾಮಸ್ಥರಿಂದ ಪಾಳು ಬಾವಿಗೆ ಕಾಯಕಲ್ಪ

Published:
Updated:
ಬಾಣಾವರ: ಗ್ರಾಮಸ್ಥರಿಂದ ಪಾಳು ಬಾವಿಗೆ ಕಾಯಕಲ್ಪ

ಬಾಣಾವರ: ಕುಡಿಯುವ ನೀರಿಗೆ ತತ್ವಾರ ಉಂಟಾಗಿರುವ ದಿನಗಳಲ್ಲಿ ಜನರೇ ಮುಂದಾಗಿ ಗಲೀಜು ತುಂಬಿದ್ದ ಬಾವಿಯನ್ನು ಶುಚಿಗೊಳಿಸಿದ ಅಪರೂಪದ ಪ್ರಸಂಗ ಪಟ್ಟಣದಲ್ಲಿ ನಡೆದಿದೆ.ಇಲ್ಲಿನ ಗ್ರಾಮಸ್ಥರು ಕಳೆದ ಕೆಲವು ದಿನಗಳಿಂದ ಕೊಳವೆಬಾವಿಗಳು ಶುಚಿ ಕಾರ್ಯದಲ್ಲಿ ತೊಡಗಿದ್ದಾರೆ. ಶತಮಾನಗಳ ಇತಿಹಾಸ ಇಲ್ಲಿನ `ಅರಸಿನ ಬಾವಿ'ಗೆ ಇದೆ. ಬಹಳ ವರ್ಷಗಳಿಂದ ಈ ಬಾವಿಯ ನೀರು ಪಟ್ಟಣದ ಜನರಿಗೆ ಬಾಯಾರಿಕೆ ತಣಿಸಿತ್ತು. ಇತ್ತೀಚಿನ ದಿನಗಳಲ್ಲಿ ಹೂಳು ತುಂಬಿ ಜನರ ಉಪಯೋಗಕ್ಕೆ ಬಾರದಂತಾಗಿತ್ತು.

ಜನರೂ ಬಾವಿ ಶುಚಿಗೊಳಿಸುವ ಕೆಲಸಕ್ಕೆ ಕೈಹಾಕಿರಲಿಲ್ಲ. ಈ ವರ್ಷ ಮಳೆ ಬಾರದೆ ಬರದ ನಾಡಿನಂತಾಗಿದೆ ಬಾಣಾವರ. ಅದರಲ್ಲೂ ಪಟ್ಟಣದಲ್ಲಿ ನೀರಿನ ಬರ ತೀವ್ರವಾಗಿದೆ. 400- 500ಅಡಿ ಭೂಮಿ ಕೊರೆದರು ನೀರು ಸಿಗುತ್ತಿಲ್ಲ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಜನತೇ ಇರುವ ಜಲಮೂಲ ಬಳಸಿಕೊಳ್ಳಲು ಮುಂದಾಗಿದ್ದಾರೆ. ಸುಮಾರು 60 ಅಡಿ ಆಳದ ಅರಸನ ಬಾವಿಯ ಹೂಳಿಗೆ ಮುಕ್ತಿ ಕಾಣಿಸಿದ್ದಾರೆ.

ಕಸ-ಕಡ್ಡಿ ತೆಗೆದು ಶುಚಿಮಾಡಿದ್ದಾರೆ. ಈ ಕೆಲಸಕ್ಕೆ ಗ್ರಾಮದ ಹಿರಿಯರು, ಕಿರಿಯರು, ಮಹಿಳೆಯರು ಎಂಬ ಭೇದವಿಲ್ಲದೆ ಎಲ್ಲರೂ ಜತೆಯಾಗಿದ್ದಾರೆ. ಎಲ್ಲರೂ ಸರದಿ ಮೇಲೆ ಬಾವಿಗಿಳಿದು ಶುಚಿ ಮಾಡುವಲ್ಲಿ ತ್ಲ್ಲಲಿನರಾಗಿದ್ದಾರೆ.ಹಿಂದೆ ಈ ಬಾವಿಯನ್ನು ಕಲ್ಯಾಣಿ ಎಂದು ಕರೆಯಲಾಗುತ್ತಿತ್ತು. ಬಾವಿಯ ದಡದಲ್ಲಿ ಶಿವನ ದೇವಾಲಯವಿದೆ. ಗಂಗಮ್ಮನ ಪೂಜೆ ಸೇರಿದಂತೆ ಪೂಜೆ-ಪುನಸ್ಕಾರಗಳಿಗೆ ಇಲ್ಲಿನ ನೀರು ಶ್ರೇಷ್ಠ ಎಂಬುದು ಜನಜನಿತ. ಇಂಥ ಪವಿತ್ರ ಬಾವಿಯನ್ನು ಸಂಬಂಧಪಟ್ಟ ಇಲಾಖೆಯವರು ಉಳಿಸಿ ಸಂರಕ್ಷಿಸಬೇಕು ಎಂದು ಗ್ರಾಮಸ್ಥರ ಮನವಿ.

ಪ್ರತಿಕ್ರಿಯಿಸಿ (+)