ಬುಧವಾರ, ಮೇ 18, 2022
23 °C

ಬಾಣಾವಾರ ಆಸ್ಪತ್ರೆ: ಸಮಸ್ಯೆಗಳ ಸರಮಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ವರದಿ

ಬಾಣಾವರ:
ಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬರೂ ಮಹಿಳಾ ವೈದ್ಯರಿಲ್ಲದಿವುದರಿಂದ ಮಹಿಳಾ ರೋಗಿಗಳು ತಾಲ್ಲೂಕು ಕೇಂದ್ರಕ್ಕೇ ತೆರಳಬೇಕಾದ  ಪರಿಸ್ಥಿತಿ ಇದೆ.ಈ ಆಸ್ವತ್ರೆಯಲ್ಲಿ ಇಬ್ಬರು ಸ್ಟಾಪ್ ನರ್ಸ್, ನಾಲ್ವರು ಡಿ ಗ್ರೂಪ್ ನೌಕ ರರು, ಪ್ರಯೋಗಾಲಯ ಸಹಾಯ ಕರು, ಒಬ್ಬರು ದಾದಿ ಇದ್ದಾರೆ. ಇಲ್ಲಿಗೆ ನಿತ್ಯ 200-250 ರೋಗಿಗಳು  ಬರುತ್ತಾರೆ.  ಈ ಆಸ್ಪತ್ರೆಯ ವ್ಯಾಪ್ತಿಗೆ ಸುಮಾರು 40,000 ಜನಸಂಖ್ಯೆ ಬರುತ್ತದೆ. ಇರುವ ಒಬ್ಬ ವೈದ್ಯಾಧಿಕಾರಿಗೆ ಕೆಲಸದ ಒತ್ತಡ ಹೆಚ್ಚಿದೆ.ಇಲಾಖೆ ಸಭೆ, ಪ್ರಗತಿ ಪರಿಶೀಲನಾ ಸಭೆ, ಜನ ಸಂಪರ್ಕ ಸಭೆಗಳಿಗೆ ಅವರು   ಹಾಜರಾ ಗಬೇಕಿರುವುದರಿಂದ ಅವರಿಗೆ ಕಾರ್ಯ ಭಾರದ ಒತ್ತಡವೂ ಜಾಸ್ತಿಯಾಗಿದೆ. ಇನ್ನು ಇಲ್ಲಿ ಒಬ್ಬರೂ ಮಹಿಳಾ ವೈದ್ಯೆ ಇಲ್ಲ. ಗುಮಾಸ್ತರು ಇಲ್ಲದಿರುವುದರಿಂದ ಇಲಾಖಾ ನೌಕರರಿಗೂ ತೊಂದರೆಯಾಗಿದೆ.    ಡಾಕ್ಟರ್, ದಾದಿಯರ ವಸತಿಗೃಹಗಳು ಶಿಥಿಲಗೊಂಡಿವೆ.  ಕೊಳವೆ ಬಾವಿಯ ಮೋಟರ್ ಹಾಳಾಗಿ ಹಲವು ತಿಂಗಳುಗಳೇ ಕಳೆದಿದ್ದರೂ ಸಂಬಂಧಪಟ್ಟ ಇಲಾಖೆಯವರು ದುರಸ್ತಿಗೊಳಿಸಿಲ್ಲ. ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಕಾಪಾಡಿಲ್ಲ. ಸುತ್ತಮುತ್ತಲಿನ ಗ್ರಾಮಗಳ ರೋಗಿಗಳು ಈ ಆರೋಗ್ಯ ಕೇಂದ್ರ ಧಾವಿಸುತ್ತಾರೆ. ಇಲ್ಲಿಗೆ ಮಹಿಳಾ ವೈದ್ಯರನ್ನು ನೇಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಆಗ್ರಹ.   ಜಿಪಂ ಸಿಇಒ, ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿ, ಕೆಡಿಪಿ ಸಭೆಗಳಲ್ಲಿ ವಿಷಯ ಪ್ರಸ್ತಾಪಿಸಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.ಆದ್ದರಿಂದ ಸಂಬಂಧಪಟ್ಟ ಇಲಾಖೆ ಮತ್ತು ಜನ ಪ್ರತಿನಿಧಿಗಳು ಇನ್ನಾದರೂ ಇತ್ತ ಗಮನಹರಿಸಿ ಪಟ್ಟಣದ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದಜೆಗೇರಿಸಲು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒಕ್ಕೊರಲಿನ ಒತ್ತಾಯ.                      

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.