ಸೋಮವಾರ, ಮೇ 17, 2021
29 °C

ಬಾಣೇಶ್ವರ ದೇಗುಲದ ಜೀರ್ಣೋದ್ಧಾರ ಚುರುಕು

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ಬಾಣಾವರ: ಪಟ್ಟಣದ ಐತಿಹಾಸಿಕ ಬಾಣೇಶ್ವರ ಸ್ವಾಮಿ ದೇವಸ್ಥಾನ ಶಿಥಿಲಗೊಂಡಿದ್ದು, ಜೀರ್ಣೊದ್ಧಾರ ಕಾರ್ಯ ಬಹಳ ಚುರುಕಿನಿಂದ ನಡೆಯುತ್ತಿದೆ.ಕ್ರಿ.ಶ. 1430ರಲ್ಲಿ ಪಾಳೇಗಾರ ರೊಬ್ಬರು ಈ ಪ್ರದೇಶವನ್ನು ಆಡಳಿತದ ಕೇಂದ್ರವಾಗಿ ಮಾಡಿಕೊಂಡು ಅಭಿವೃದ್ಧಿ ಪಡಿಸಿದರು. ಇಲ್ಲಿಯೇ ಈ ದೇಗುಲ ನಿರ್ಮಿಸಿದರು ಎಂಬುದು ಪ್ರತೀತಿ. ಅಂದಿನಿಂದ ಬಾಣಾವರ ಪ್ರಮುಖ ಪಟ್ಟಣವಾಗಿ ಬೆಳೆದಿದೆ.ಬಾಣೇಶ್ವರ ದೇವಸ್ಥಾನದ ಮತ್ತೊಂದು ಐತಿಹಾಸಿಕ ಸಂಗತಿ ಎಂದರೆ ಊರಿನ ಬಹುಪಾಲು ದೇವ ಸ್ಥಾನದ ಬಾಗಿಲುಗಳು ಬಾಣೇಶ್ವರ ದೇವಸ್ಥಾನದ ದಿಕ್ಕಿಗಿದೆ. ಆಂಜನೇಯ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಬಸವಣ್ಣನ ದೇವಸ್ಥಾನ, ಕರಿಯಮ್ಮನ ದೇವಸ್ಥಾನ, ಹಿರೇಮಠ ಮತ್ತು ಕೋಡಿಮಠಗಳು ಅಲ್ಲದೇ ಇನ್ನೂ 8 ದೇವಮಂದಿರಗಳ ಬಾಗಿಲುಗಳು ಈ ದೇವಾಲಯಕ್ಕೆ ನೇರವಾಗಿವೆ.ಸುಂದರ ಕಲಾಕೃತಿ, ಆಕರ್ಷಕ ಶಿಲ್ಪಕಲಾ ವಿನ್ಯಾಸದಿಂದ ನಿರ್ಮಿಸಲಾದ ದೇಗುಲ ರಕ್ಷಣೆ ಇಲ್ಲದೆ ಅವಸಾನದಂಚಿಗೆ ತಲುಪಿದೆ. ದೇಗುಲ ಕಾಯಕಲ್ಪ ಮಾಡುವ ಉದ್ದೇಶದಿಂದ ಬಾಣೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ರಚಿಸಿಕೊಂಡರು. ಕಳೆದ ವರ್ಷದ ಆಗಸ್ಟ್‌ನಲ್ಲಿ ಬಾಣೇಶ್ವರ ಸ್ವಾಮಿ ದೇಗುಲದ ಜೀರ್ಣೋದ್ಧಾರ ಆರಂಭಿ ಸಿದರು.ತಮಿಳುನಾಡಿನ ಕುಶಲಕರ್ಮಿ ಗಳನ್ನು ಹಾಗೂ ದೊಡ್ಡಬಳ್ಳಾಪುರ ಕೊರೆಯಿಂದ ಕಲ್ಲುಗಳನ್ನು ತರಿಸಿ ಕೆತ್ತನೆ ಕೆಲಸ ಶುರು ಮಾಡಲಾಯಿತು. ಪ್ರಾಂಗಣದ ನಿರ್ಮಾಣ ಕಾರ್ಯ ಈ ಭರದಿಂದ ಸಾಗಿದೆ. ಈಗಾಗಲೇ ನಿರ್ಮಾಣವಾಗಿರುವ ದೇವಾಲಯದ ವಿನ್ಯಾಸ ಆಕರ್ಷಣೀಯವಾಗಿದೆ. ಬಾಣೇಶ್ವರ ದೇಗುಲವನ್ನು ಸುಮಾರು 80 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, ದಿನೇ ದಿನೇ ಕಾರ್ಯ ಚುರುಕು ಪಡೆಯುತ್ತಿದೆ.ಆದರೆ ಜೀರ್ಣೋದ್ಧಾರಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇದೆ. ಸಾರ್ವ ಜನಿಕರು ಹೆಚ್ಚಿನ ರೀತಿಯಲ್ಲಿ ಅರ್ಥಿಕ ಸಹಾಯ ಮಾಡಲು ಸಮಿತಿ ಕೋರಿದೆ. ಸಹಾಯ ಮಾಡಬಯ ಸುವರು ಜೀರ್ಣೋದ್ಧಾರ ಸಮಿತಿ ಸಂಪರ್ಕಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.