ಬುಧವಾರ, ಏಪ್ರಿಲ್ 14, 2021
23 °C

ಬಾತ್‌ರೂಂಗೆ ಚಿನ್ನದ ನಲ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾತ್‌ರೂಂಗೆ ಚಿನ್ನದ ನಲ್ಲಿ

ಅದ್ದೂರಿ ಮನೆ, ಅದಕ್ಕಿಂತ ಭವ್ಯವಾದ ಸ್ನಾನಗೃಹ, ಅದರೊಳಗೆ ಚಿನ್ನದ ಲೇಪನದ ಸಿಂಕ್, ಚಿನ್ನದ ಕೊಳಾಯಿ. ಇದೇನೂ ಕನಸಲ್ಲ. ಕೈತುಂಬ ಕಾಸಿದ್ದರೆ ನನಸಾಗಲು ಸಮಯ ಬೇಕಿಲ್ಲ.ಏಕೆಂದರೆ ಜರ್ಮನ್ ಮೂಲದ ಬಾತ್‌ರೂಂ ಫಿಟ್ಟಿಂಗ್ ಬ್ರಾಂಡ್ ‘ಕ್ಯುಕೊ ಸ್ಟುಡಿಯೊ’ ಬೆಂಗಳೂರಿನ ಸಿರಿವಂತ, ಸೌಂದರಪ್ರಿಯ ಗ್ರಾಹಕರಿಗಾಗಿ ಚಿನ್ನದ ಸಿಂಕ್, ಕೊಳಾಯಿಗಳನ್ನು ಪರಿಚಯಿಸಿದೆ. ಎಡಿಶನ್ ಪ್ಯಾಲೇಸ್ ಡಿಲಕ್ಸ್ ಶ್ರೇಣಿಯ ಈ ಸಾಧನಗಳಲ್ಲಿ ಸಮಕಾಲೀನ ಮತ್ತು ಸಾಂಪ್ರದಾಯಿಕ ವಿನ್ಯಾಸಗಳು ಮೇಳೈಸಿವೆ. ಅಸಲಿ ಬಂಗಾರ, ಉತ್ತಮ ಮರ, ಅಮೃತಶಿಲೆ, ಹೊಳಪುಳ್ಳ ಕಪ್ಪು ಬಿಳುಪಿನ ಹೊರಮೈಯಿಂದ ಶೋಭಿಸುವ ಈ ಸೆಟ್‌ನ ಬೆಲೆ 7 ಲಕ್ಷದಿಂದ 15 ಲಕ್ಷ ರೂಪಾಯಿ ವರೆಗೆ.ಅಧಿಕ ವರಮಾನದ ವರ್ಗದವರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ನಾನ ಗೃಹದ ಉಪಕರಣಗಳು, ಕೈ ತೊಳೆಯುವ ಬೇಸಿನ್‌ಗಳು, ಆಕರ್ಷಕ ಕನ್ನಡಿಗಳು, ಕಪಾಟುಗಳು, ನೀರಿನ ಕಾರಂಜಿಗಳು ಮತ್ತಿತರ ಸಾಧನಗಳು ಇಲ್ಲಿವೆ. ಇದು ಅನನ್ಯ ಅನುಭವ ನೀಡಲಿದೆ ಎನ್ನುತ್ತಾರೆ ಕ್ಯೂಕೊ ವ್ಯವಸ್ಥಾಪಕ ರಾಹುಲ್ ಖೇರ್. ಸ್ಥಳ: ನಂ.1. ಗುಟ್ಟೆ ಆಂಜನೇಯ ದೇವಸ್ಥಾನದ ರಸ್ತೆ, ಹೊಸೂರು ಮುಖ್ಯ ರಸ್ತೆ, ವಿಲ್ಸನ್ ಗಾರ್ಡನ್.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.