ಶನಿವಾರ, ಜನವರಿ 25, 2020
16 °C

ಬಾನಂಗಳಕ್ಕೆ ಅಣ್ಣಾ ಗಾಳಿಪಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಪಿಟಿಐ): ಜೈಪುರದಲ್ಲಿ ಮಕರ ಸಂಕ್ರಾಂತಿ ಉತ್ಸವದಲ್ಲಿ ಅಣ್ಣಾ ಹಜಾರೆ ಅವರ ಭಾವಚಿತ್ರವಿರುವ ಗಾಳಿಪಟ ಎಲ್ಲರ ಆಕರ್ಷಣೆ. ಮಾರುಕಟ್ಟೆಯಲ್ಲಿ ಅವರ ಹೆಸರಿನ ವಿವಿಧ ಬಣ್ಣ ಮತ್ತು ಗಾತ್ರದ ಗಾಳಿಪಟಗಳ ಮಾರಾಟ ಭರ್ಜರಿಯಾಗಿದೆ.ಸಾಮಾನ್ಯವಾಗಿ ಗಾಳಿಪಟ ಪ್ರಿಯರು ಸಿನಿಮಾ ನಟ ನಟಿಯರ ಬಣ್ಣ ಬಣ್ಣದ ಚಿತ್ರವಿರುವ ಗಾಳಿಪಟಗಳನ್ನು ಖರೀದಿಸುವುದು ವಾಡಿಕೆ. ಆದರೆ ಈ ಬಾರಿ ಅಣ್ಣಾ ಹಜಾರೆ ಚಿತ್ರ ಇರುವ ಗಾಳಿಪಟಗಳನ್ನೇ ಖರೀದಿಸುತ್ತಿದ್ದಾರೆ ಎಂದು ವರ್ತಕರು ಹೇಳಿದ್ದಾರೆ.ಹಲವು ತಿಂಗಳುಗಳಿಂದ ಸುದ್ದಿಯಲ್ಲಿರುವ ಅಣ್ಣಾ ಹಜಾರೆ ಅವರ ದೊಡ್ಡ ಚಿತ್ರ ಇರುವ ಗಾಳಿಪಟಗಳನ್ನೇ ತಯಾರಕರು ಸಿದ್ಧಪಡಿಸಿದ್ದಾರೆ. ದೇಶದ ಹಲವೆಡೆ ಮಕರ ಸಂಕ್ರಾಂತಿಯನ್ನು ಗಾಳಿಪಟ ಉತ್ಸವವಾಗಿ ಆಚರಿಸಲಾಗುತ್ತಿದೆ.ಬೇಡಿಕೆ ಹೆಚ್ಚಳ: `ಈ ಬಾರಿಯ ಗಾಳಿಪಟಗಳ ಬೇಡಿಕೆಗಿಂತ ಶೇ 20-40ರಷ್ಟು ಪೂರೈಕೆ ಕಡಿಮೆಯಾದುದರ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಾಗಿದೆ. ಶಾಲೆಗಳಿಗೆ ರಜೆ ಇರುವುದರಿಂದ ಈ ಬಾರಿ ಉತ್ತಮ ವ್ಯಾಪಾರವಾಗಲಿದೆ ಎಂದು ನಿರೀಕ್ಷಿಸಲಾಗಿದೆ~ ಎಂದು ವರ್ತಕ ಪ್ರಕಾಶ ಪನವಾರ ಹೇಳುತ್ತಾರೆ.

ಪ್ರತಿಕ್ರಿಯಿಸಿ (+)