ಬಾನಂದೂರು ಸಂಭ್ರಮ

7

ಬಾನಂದೂರು ಸಂಭ್ರಮ

Published:
Updated:
ಬಾನಂದೂರು ಸಂಭ್ರಮ

ಕರ್ನಾಟಕ ದಲಿತ ಸಂಘರ್ಷ ಸಮಿತಿ: ಗುರುವಾರ 60 ವರ್ಷ ತುಂಬಿದ ಜಾನಪದ ಗಾಯನ ಗಾರುಡಿಗ ಬಾನಂದೂರು ಕೆಂಪಯ್ಯ ಅವರ ಸಾಧನೆಗಳ ಮೆಲುಕು, ಗೌರವಾರ್ಪಣೆ ಕಾರ್ಯಕ್ರಮ `ಜಾನಪದ ಚೇತನ ಬಾನಂದೂರು ಸಂಭ್ರಮ~. ಜನ್ನಿ, ಅಪ್ಪಗೆರೆ ತಿಮ್ಮರಾಜು, ಪಿಚ್ಚಳ್ಳಿ ಶ್ರೀನಿವಾಸ್, ಗೊಲ್ಲಹಳ್ಳಿ ಶಿವಪ್ರಸಾದ್, ಗ.ನ. ಅಶ್ವತ್ಥ್, ಆನಂದ ಮಾಲೂರು ಅವರಿಂದ ಜಾನಪದ ಹಾಡುಗಳ ಸಂಭ್ರಮ.ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಿಡದಿ ಸಮೀಪದ ಬಾನಂದೂರಿನಲ್ಲಿ 1951 ಜೂನ್ 14ರಂದು ವೆಂಕಟಯ್ಯ ಮತ್ತು ಹುಚ್ಚಮ್ಮನವರ ಮಗನಾಗಿ ಹುಟ್ಟಿದ ಕೆಂಪಯ್ಯ ಅವರದು ಜನಪದ ಗಾಯಕರರ ಮನೆತನ. ಹೀಗಾಗಿ ಚಿಕ್ಕಂದಿನಿಂದಲೇ ಜನಪದ ಕ್ಷೇತ್ರದಲ್ಲಿ ಆಸಕ್ತಿ ಬೆಳೆಯಿತು.

 

ತಾಯಿ ತಂದೆ, ಅಣ್ಣ-ಅಕ್ಕ  ಜಾನಪದ ಕಲಾವಿದರಾಗಿದ್ದರಿಂದ ಸಹಜವಾಗಿ ಸಂಗೀತಕ್ಕೆ ಒಲಿದರು, ಬಾಲ ಜನಪದ ಗಾಯಕನಾಗಿ ಅರಳಿದರು.ದಲಿತರ ಜಾನಪದ ಗೀತೆಗಳನ್ನು ಮೂಲ ದಾಟಿಯಲ್ಲಿ ಸಂಗ್ರಹಿಸಿ ಹಾಡುವುದು ಇವರ ಗಾಯನದ ವಿಶೇಷ. ಬೆಂಗಳೂರು ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್), ಕರ್ನಾಟಕ ವಿವಿಯ ಎಂ.ಎ ಪದವೀಧರ.ಮೈಸೂರು ಆಕಾಶವಾಣಿಯಲ್ಲಿ ಉದ್ಘೋಷಕನಾಗಿ ವೃತ್ತಿ ಆರಂಭ. ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ವಿಶೇಷ ಜನಪದ ಸಂಗೀತ ನಿರ್ಮಾಪಕರಾಗಿ ಹತ್ತು ವರ್ಷ ಕಾರ್ಯ. ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಸಹಾಯಕ ಕೇಂದ್ರ ನಿರ್ದೇಶಕ ಮತ್ತು ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದವರು.ದೇಶದ ಹಲವೆಡೆ ಜನಪದ ಕಾರ್ಯಕ್ರಮನೀಡಿದ್ದಾರೆ, ಅನೇಕ ಸಾಕ್ಷ್ಯ ಚಿತ್ರಗಳಿಗೆ, ನಾಟಕಗಳಿಗೆ, ಮಕ್ಕಳ ಸಾಂಸ್ಕೃತಿಕ  ಮೇಳಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರಷ್ಯದ ಮೇರು ಕವಿ ಅಲೆಗ್ಸಾಂಡರ್ ಮಷ್ಕಿನ್‌ಅವರ ಜನಪದ ಮಹಾಕಾವ್ಯ ಆಧರಿಸಿದ `ಜಿಪ್ಸಿಗಳು~ ನಾಟಕಕ್ಕೆ ಸಂಗೀತ ಸಂಯೋಜನೆ ಮಾಡಿ ಹೆಸರು ಗಳಿಸಿದ್ದಾರೆ.ರಾಜ್ಯೋತ್ಸವ ಪ್ರಶಸ್ತಿ, ಅಂಬೇಡ್ಕರ್ ಪ್ರಶಸ್ತಿ, ಡಾ.ಪುಟ್ಟರಾಜ ಗವಾಯಿಗಳ ಕೈಯಿಂದ `ಜನಪದ ಸಂಗೀತ ಲೋಕದ ಧ್ರುವತಾರೆ~ ಬಿರುದಿಗೆ ಪಾತ್ರರಾಗಿದ್ದಾರೆ.ಬುದ್ಧವಂದನೆ: ಪೂಜ್ಯ ಬೋಧಿದತ್ತ ಬಂತೇಜಿ. ಉದ್ಘಾಟನೆ: ಮೋಟಮ್ಮ. ಅತಿಥಿಗಳು: ಆರ್.ಮೋಹನ್ ರಾಜು, ಡಾ.ಮಹೇಶ ಜೋಶಿ, ಸಿ.ಎಸ್. ದ್ವಾರಕನಾಥ್. ಅಧ್ಯಕ್ಷತೆ: ಡಾ.ಎಂ.ವೆಂಕಟಸ್ವಾಮಿ.ಸ್ಥಳ; ಯವನಿಕ, ನೃಪತುಂಗ ರಸ್ತೆ. ಸಂಜೆ 5.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry