ಬಾನುಲಿಯಲ್ಲಿ ಕರಿಶ್ಮಾ

7

ಬಾನುಲಿಯಲ್ಲಿ ಕರಿಶ್ಮಾ

Published:
Updated:

`ದಿಲ್ ತೊ ಪಾಗಲ್ ಹೇ' ಹುಡುಗಿ ಕರಿಶ್ಮಾ ಕಪೂರ್ ತಮ್ಮ 38ನೇ ವಯಸ್ಸಿನಲ್ಲಿ ರೇಡಿಯೋ ಜಾಕಿಯಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಈಕೆ ಈಗ ಮಹಿಳೆಯರು ಗ್ಲಾಮರ್ ಗೊಂಬೆಯಾಗುವುದು ಹೇಗೆ ಎಂಬುದರ ಕುರಿತು ಸಲಹೆ ನೀಡಲಿದ್ದಾರಂತೆ.ಬಹುತೇಕ ಮಹಿಳೆಯರು ಫ್ಯಾಷನ್ ಕುರಿತು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಆ ಫ್ಯಾಷನ್ ಎಂಬ ಮಾಯಾ ಜಿಂಕೆಯನ್ನು ಹಿಡಿಯಲು ಪಡಬಾರದ ಕಷ್ಟಪಡುತ್ತಿರುತ್ತಾರೆ. ಇಂಥವರಿಗೆಲ್ಲರಿಗೂ ಸದ್ಯದ ಫ್ಯಾಷನ್, ಉಡುಗೆ ಶೈಲಿ, ಬಗೆಬಗೆಯ ದೇಹದ ಅಳತೆಯ ಮಹಿಳೆಯರು ಆಕರ್ಷಕವಾಗಿ ಕಾಣಲು ತೊಡಬಹುದಾದ ಉಡುಗೆಗಳ ಕುರಿತು ಬಿಗ್ 92.7 ಎಫ್‌ಎಂ.ನಲ್ಲಿ ಕರಿಶ್ಮಾ ಸಲಹೆಗಳನ್ನು ನೀಡಲಿದ್ದಾರೆ.ಮನರಂಜನಾ ಕ್ಷೇತ್ರದಲ್ಲಿನ ಸದ್ಯದ ಟ್ರೆಂಡ್‌ಗಳ ಕುರಿತು ಹರಟುವ ಕರೀಶ್ಮಾ, ಕೂದಲು, ತ್ವಚೆಯ ಆರೈಕೆಗೂ ಸಲಹೆ ಸೂಚನೆಗಳನ್ನು ನೀಡಲಿದ್ದಾರಂತೆ. `ಸಿನಿಮಾ ಹಾಗೂ ಕಿರುತೆರೆಯ ನನ್ನ ಅನುಭವದೊಂದಿಗೆ ಇದೀಗ ಹೊಸ ಬಗೆಯ ಮಾಧ್ಯಮವಾಗಿರುವ ರೇಡಿಯೋವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಈ ಮೂಲಕ ನನ್ನ ಅಭಿಮಾನಿಗಳಿಗೆ ನಾನು ಮತ್ತಷ್ಟು ಹತ್ತಿರವಾಗುವ ಭರವಸೆ ಇದೆ' ಎಂದೆನ್ನುವ ಕರೀಶ್ಮಾ ಅವರ ಕಾರ್ಯಕ್ರಮ `ಬಿಗ್ ಮೇಮ್‌ಸಾಬ್' ಮಧ್ಯಾಹ್ನ ಬಾನುಲಿಯಲ್ಲಿ ಬಿತ್ತರವಾಗಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry