ಸೋಮವಾರ, ನವೆಂಬರ್ 18, 2019
20 °C

ಬಾಪೂಜಿ ಸಂಸ್ಥೆಗೆ ಪ್ರಶಸ್ತಿ

Published:
Updated:

ಹುಬ್ಬಳ್ಳಿ: ದಾವಣಗೆರೆಯ ಬಾಪೂಜಿ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ ತಂಡ ಭಾನುವಾರ ಇಲ್ಲಿ ಮುಕ್ತಾಯಗೊಂಡ ಕೆಎಲ್‌ಇ ಸೊಸೈಟಿಯ ವ್ಯವಸ್ಥಾಪನಾ ಅಧ್ಯಯನ ಹಾಗೂ ಸಂಶೋಧನಾ ಸಂಸ್ಥೆ (ಐಎಂಎಸ್‌ಆರ್) ಆಶ್ರಯದ ಗ್ರಾಮೀಣ ಕ್ರೀಡೆಗಳ ಸ್ಪರ್ಧೆ `ಕುಡೋಸ್-13'ರ ಸಮಗ್ರ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿತು.ಕಬಡ್ಡಿ ಹಾಗೂ ಬುಡಕಟ್ಟು ಜನರ ನೃತ್ಯ `ಅಗಮ್ಯ'ದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ ತಂಡ ಉತ್ತರ ಕರ್ನಾಟಕದ 11 ಕಾಲೇಜುಗಳ ತಂಡಗಳನ್ನು ಹಿಂದಿಕ್ಕಿ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ಕಬಡ್ಡಿಯಲ್ಲಿ ಹುಬ್ಬಳ್ಳಿಯ ಚೇತನಾ ಬಿಸಿನೆಸ್ ಸ್ಕೂಲ್ ತಂಡ ರನ್ನರ್ ಅಪ್ ಆಯಿತು. ಕೋ-ಕೋದಲ್ಲಿ ಹುಬ್ಬಳ್ಳಿ ತಾರಿಹಾಳದ ಐಇಎಂಎಸ್ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡರೆ ಐಬಿಎಂಆರ್ ತಂಡ ರನ್ನರ್ ಅಪ್ ಆಯಿತು.ಚಿನ್ನಿದಾಂಡು ಸ್ಪರ್ಧೆಯ ಪ್ರಶಸ್ತಿ ಹುಬ್ಬಳ್ಳಿಯ ಜಿಬಿಎಸ್ ಕಾಲೇಜು ತಂಡದ ಪಾಲಾಯಿತು. ರನ್ನರ್ ಅಪ್ ಪ್ರಶಸ್ತಿ ಚೇತನಾ ಬಿಸಿನೆಸ್ ಸ್ಕೂಲ್ ತಂಡಕ್ಕೆ ಲಭಿಸಿತು. ಲಗೋರಿಯಲ್ಲಿ ಬೆಳಗಾವಿಯ ಕೆಎಲ್‌ಇ ಕಾಲೇಜು ತಂಡ  ಪ್ರಶಸ್ತಿ ಗಳಿಸಿದರೆ ರನ್ನರ್ ಅಪ್ ಸ್ಥಾನವನ್ನು ಚೇತನಾ ಬಿಸಿನೆಸ್ ಸ್ಕೂಲ್ ತಂಡ ಗಳಿಸಿಕೊಂಡಿತು. ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಐಎಂಎಸ್‌ಆರ್ ತಂಡಕ್ಕೆ ಪ್ರಶಸ್ತಿ ಸಂದಿತು. ಜಿಬಿಎಸ್ ತಂಡ ರನ್ನರ್‌ಅಪ್ ಆಯಿತು.ಐಎಂಎಸ್‌ಆರ್ ತಂಡ ಹಾಗೂ ಜಿಬಿಎಸ್ ತಂಡ ಪಗಡೆ ಆಟದ ಮೊದಲ ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಕುಂಟೆ ಬಿಲ್ಲೆ ಸ್ಪರ್ಧೆಯಲ್ಲಿ ಐಎಂಎಸ್‌ಆರ್ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಬೆಳಗಾವಿಯ ಕೆಎಲ್‌ಇ ಬಿಬಿಎಂ ಕಾಲೇಜು ತಂಡಕ್ಕೆ ರನ್ನರ್ ಅಪ್ ಪ್ರಶಸ್ತಿ ಸಂದಿತು. ಸಾಂಸ್ಕೃತಿಕ ಸ್ಪರ್ಧೆ ಅಗಮ್ಯದ ಎರಡನೇ ಬಹುಮಾನ ಐಎಂಎಸ್‌ಆರ್ ತಂಡದ ಪಾಲಾಯಿತು.ಭಾನುವಾರ ಸಂಜೆ ನಡೆದ ವೈಭವದ ಸಮಾರೋಪ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗ ಸುನಿಲ್ ಜೋಷಿ ಪ್ರಶಸ್ತಿಗಳನ್ನು ವಿತರಿಸಿದರು. ಐಎಂಎಸ್‌ಆರ್ ನಿರ್ದೇಶಕ ಡಾ.ಪಿ.ಬಿ. ರೂಡಗಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)