ಗುರುವಾರ , ಮೇ 13, 2021
16 °C
ಶಾಸಕರ ಗೈರು ಸಾರ್ವಜನಿಕರ ಆಕ್ರೋಶ: ಮಠಾಧೀಶರ ನೇತೃತ್ವ

`ಬಾಬಾಸಾಹೇಬರ ಪುಣ್ಯತಿಥಿ ಉತ್ಸವವಾಗಲಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಬಾಬಾಸಾಹೇಬರ ಪುಣ್ಯತಿಥಿ ಉತ್ಸವವಾಗಲಿ'

ನರಗುಂದ: ಪ್ರತಿ ವರ್ಷ ಜೂನ್ 12ರಂದು ನಡೆಯುವ ನರಗುಂದ ಬಾಬಾಸಾಹೇಬರ ಪುಣ್ಯತಿಥಿಯನ್ನು ಸರ್ಕಾರಿ ಉತ್ಸವವಾಗಿ ಆಚರಿಸುವ ಸಲುವಾಗಿ ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಶಾಸಕ ಬಿ.ಆರ್.ಯಾವಗಲ್‌ರು ಸೇರಿದಂತೆ ಜನಪ್ರತಿನಿಧಿಗಳು ಗೈರು ಹಾಜರಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಈ ಕುರಿತಂತೆ ಎಬಿವಿಪಿ ಸೇರಿದಂತೆ ವಿವಿಧ ಸಂಘಟನೆಗಳು ಇದೇ  ಜೂನ್ 11 ಹಾಗೂ 12ರಂದು ಧಣಿ ನಡೆಸಿದ್ದವು. ಜೊತೆಗೆ ಪುರಸಭೆ ಅಧಿಕಾರಿಗಳಿಗೆ ಆರಂಭದಲ್ಲಿ ಅಚರಣೆ  ಮಾಡಲು ತಡೆಯೊಡ್ಡಿತ್ತು. ಆದರೆ ಅಧಿಕಾರಿಗಳು ಸಭೆಯ ಆಶ್ವಾಸನೆ ನೀಡಿದ್ದರಿಂದ ಧರಣಿ ಹಿಂತೆಗೆದುಕೊಳ್ಳಲಾಗಿತ್ತು. ಆಗಲೂ  ಜನಪ್ರತಿನಿಧಿ ಗಳಿಂದ ಸ್ಪಂದನೆ ದೊರೆತಿಲ್ಲ. ಜೊತೆಗೆ ಸೋಮವಾರ ನಡೆದ ಸಭೆಯಲ್ಲಿ ಶಾಸಕರು ಗೈರು ಹಾಜರಾಗಿದ್ದಕ್ಕೆ  ಮತ್ತಷ್ಟು ಅಸಮಾಧಾನ ಕಂಡು ಬಂದು ಅವರ ಸಮ್ಮುಖದಲ್ಲಿಯೇ ಮತ್ತೊಮ್ಮೆ ಸಭೆ ನಡೆಸಲು ನಿರ್ಧರಿಸಲಾಯಿತು.ಸಭೆಯಲ್ಲಿ ವಿವಿಧ ಸಂಘಟನೆಗಳ ಸದಸ್ಯರು  ಹಾಗೂ ಸಾರ್ವಜನಿಕರು  ಬಾಬಾಸಾಹೇಬರ ಪುಣ್ಯ ತಿಥಿಯನ್ನು ಸರಕಾರಿ ಉತ್ಸವವಾಗಬೇಕು. ಈ ಕುರಿತು ತಾಲ್ಲೂಕು ಆಡಳಿತ ಹಾಗೂ ಪುರಸಭೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸ ಬೇಕು. ಬಾಬಾಸಾಹೇಬರ ಎಲ್ಲ ಅವ ಶೇಷಗಳನ್ನು ಸಂರಕ್ಷಿಸಲು ಕೂಡಲೇ ಪ್ರಸ್ತಾವನೆ  ಸಲ್ಲಿಸಬೇಕು ಎಂದು ಆಗ್ರಹಿಸಿದರು.ಅಧಿಕಾರಿಗಳ ವಿರುದ್ಧ ಆಕ್ರೋಶ: ಬಾಬಾಸಾಹೇಬರ ಅವಶೇಷಗಳನ್ನು ಹಾಗೂ  ಮ್ಯೋನಸನ್‌ನ ಗೋರಿಯನ್ನು ಸಂರಕ್ಷಿಸುವಲ್ಲಿ ಪುರಸಭೆ ಅಧಿಕಾರಿಗಳು ಲಕ್ಷ ವಹಿಸದೇ ಇರುವುದಕೆ ಹಾಗೂ ಸಭೆಯಲ್ಲಿ ಎಲ್ಲ ಅಧಿಕಾರಿಗಳು ಹಾಜರಾಗದೇ ಇರುವುದಕ್ಕೆ ತಹಸೀಲ್ದಾರರ ವಿರುದ್ಧವೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಸಭೆಯಲ್ಲಿ ಡಾ.ಎ.ಬಿ.ವಗ್ಗರ ಮಾತನಾಡಿ `ಸಭೆಯಲ್ಲಿ ನರಗುಂದ ಬಾಬಾಸಾಹೇಬರ ಅವಶೇಷಗಳನ್ನು ಸಂರಕ್ಷಿಸುವ ಕಲೆಸ ನಡೆಯಬೇಕಾಗಿದೆ. ಇದಕ್ಕೆ ಕೂಡಲೇ ಪ್ರಾಚ್ಯವಸ್ತು ್ತ ಇಲಾಖೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.ಸಭೆಯಲ್ಲಿ ಹಾಜರಿದ್ದ ಪ್ರಾಚ್ಯವಸ್ತು ಇಲಾಖೆ ಅಧಿಕಾರಿ ರಾಜಾರಾಮ ಮಾತನಾಡಿ `ತಾಲ್ಲೂಕು ಆಡಳಿತ ನರಗುಂದ ಬಾಬಾಸಾಹೇಬರ ಎಲ್ಲ ಇತಿಹಾಸ, ಪುರಾವೆಗಳ ಸಹಿತ ಜಿಲ್ಲಾ ಧಿಕಾರಿಗಳ ಕಚೇರಿಗೆ ಸಲ್ಲಿಸಿದರೆ, ಅದರ ಮೂಲಕ ನಮಗೆ ಸೂಚನೆ ಬಂದರೆ ನಾವು ಕೂಡಲೇ ನಮ್ಮ ಸುಪರ್ದಿಗೆ ತೆಗೆದುಕೊಳ್ಳುವುದಾಗಿ ಹೇಳಿದರು.ಸಭೆಯಲ್ಲಿ ಮಠಾಧೀಶರಾದ ಪತ್ರಿವನಮಠದ ಸಿದ್ದವೀರ ಶಿವಯೋಗಿ ಶಿವಾಚಾರ್ಯರು, ಹಿರೇಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ಕೂಡಲೇ ಬಾಬಾ ಸಾಹೇಬರ ಪುಣ್ಯತಿಥಿಯನ್ನು ಸರ್ಕಾರಿ ಉತ್ಸವವಾಗಿ ಆಚರಿಸಲು ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.ಸಭೆಯಲ್ಲಿ ವಿಜಯ ಕುಲಕರ್ಣಿ, ಸಿಪಿಐ ಪ್ರಶಾಂತ ಸಿದ್ದನಗೌಡ್ರ, ತಹ ಶೀಲ್ದಾರ್ ವಿ.ಆರ್.ಪಾಟೀಲ, ಪುರಸಭೆ ಮುಖ್ಯಾಧಿಕಾರಿ ರಾಜಶೇಖರ, ಎಸ್.ಎಂ.ಉಕ್ಕಲಿ, ಜಿ.ಬಿ.ಕುಲಕರ್ಣಿ, ರುದ್ರಾನಾಥ ಕಲ್ಯಾಣ ಶೆಟ್ಟಿ, ವಿ.ಎಸ್. ಢಾಣೆ, ಎಬಿವಿಪಿಯ ಸಂಜು ನಲವಡೆ, ಅಕ್ಷಯ ಜೋಷಿ, ನಂದೀಶ ಮಠದ, ಮಂಜು ಪಲ್ಲೇದ, ಜಯಕರ್ನಾಟಕದ ಬಸವಾರಾಜ ತಾವರೆ, ನಿಖಿಲ ಸುಬೇ ದಾರ ಸೇರಿದಂತೆ  ಮೊದಲಾದವರು ಭಾಗವಹಿಸಿದ್ದರು.ವೀಕ್ಷಣೆ: ಸಭೆ ನಂತರ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು  ಎಬಿವಿಪಿ ಕಾರ್ಯಕರ್ತರೊಡನೆ ಬಾಬಾ ಸಾಹೇಬರ ಐತಿಹಾಸಿಕ ಅವಶೇಷಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.