ಬುಧವಾರ, ಏಪ್ರಿಲ್ 14, 2021
23 °C

ಬಾಬಾಸಾಹೇಬ್‌ಗೆ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ಡಾ.ಅಂಬೇಡ್ಕರ್ ಅವರ 120ನೇ ಜಯಂತಿ ಆಚರಣೆ ಪ್ರಯುಕ್ತ ಇಲ್ಲಿನ ದಲಿತ ಸಂಘಟನೆಗಳು ಏರ್ಪಡಿಸಿದ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಇರಿಸಿ ಏಳು ಕುದುರೆಗಳ ಸಾರೋಟದಲ್ಲಿ ಮೆರವಣಿಗೆ ನಡೆಸಲಾಯಿತು. ಡಾ.ಶಾಂತವೀರ ಮನಗೂಳಿ ಮೆರವಣಿಗೆ ಉದ್ಘಾಟಿಸಿದರು. ಶಾಸಕ ರಮೇಶ ಭೂಸನೂರ, ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಸಿದ್ದರಾಮ ಪಾಟೀಲ ಧ್ವಜಾರೋಹಣ ಮಾಡಿದರು.ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದಿದ್ದವು. ಮೆರವಣಿಗೆಯಲ್ಲಿ ಆನೇಕಲ್‌ನ ಕೀಲು ಕುದುರೆ, ಸೇಲಂನ ನಾಂಡಿಯಾ ನೃತ್ಯ, ಕೃಷ್ಣಗಿರಿಯ ಡೋಲು ಪಂಪ್‌ಸಟ್, ಚಿತ್ರದುರ್ಗದ ಮಹಿಳಾ ವೀರಗಾಸೆ, ಮಂಡ್ಯದ ಮಹಿಳಾ ಪೂಜಾ ಕುಣಿತ, ಸಾಗರದ ಡೊಳ್ಳು ಕುಣಿತ, ವೀರಗಾಸೆ, ಸೊಲ್ಲಾಪೂರದ ಜಾಂಜ್ ಕುಣಿತ ಹೀಗೆ ಹಲವು ತಂಡಗಳು ಕಲಾ ಪ್ರದರ್ಶನ ನೀಡಿದವು.ಮೆರವಣಿಗೆಯಲ್ಲಿ ತಾಲ್ಲೂಕು ದಂಡಾಧಿಕಾರಿ ಔದುರಾಮ್, ಪುರಸಭೆ ಅಧ್ಯಕ್ಷ ಸುಶಾಂತ ಪೂಜಾರಿ, ಉಪಾಧ್ಯಕ್ಷ ಭೀಮು ಕಲಾಲ, ಎಂ.ಎನ್.ಕಿರಣ್‌ರಾಜ್, ರಾಜು ಕೂಚಬಾಳ, ಜೈ ಭೀಮದಳದ ಅಧ್ಯಕ್ಷ ಆನಂದ ಮಾಣಸೂಣಗಿ, ಉಪಾಧ್ಯಕ್ಷ ಅಶೋಕ ಡೂಣೂರ, ಗೋಪಿ ಬಡಿಗೇರ, ಬಾಲು ಚಲವಾದಿ, ಪರಶು ದಿಂಡವಾರ, ಆಲಮೇಲದ ಪ್ರದೀಪ ಗೌರ, ಗುಂಡು ಮೇಲಿಮನಿ, ಶಿವಶರಣ ಬಿಸನಾಳ, ಸುರೇಶ ಕೂಚಬಾಳ, ಪ್ರಕಾಶ ಹೊಸಮನಿ, ನಿಂಗಪ್ಪ ಬಡಿಗೇರ, ಮುತ್ತಪ್ಪ ಕೂಚಬಾಳ ಮೊದಲಾದವರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.