ಗುರುವಾರ , ಮೇ 13, 2021
16 °C

ಬಾಬಾ- ಅಣ್ಣಾ ಮಧ್ಯೆ ಬಿರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಲು ಕೈಜೋಡಿಸಿರುವ ಅಣ್ಣಾ ತಂಡ ಮತ್ತು ಬಾಬಾ ರಾಮದೇವ್ ಮಧ್ಯೆ ಬಿರುಕು ಉಂಟಾಗಿದೆ. ಮೈತ್ರಿ ಉಂಟಾಗಿ ಒಂದು ತಿಂಗಳೂ ಗತಿಸಿಲ್ಲ, ಅಷ್ಟರೊಳಗೇ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ.`ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದ ತೀರ್ಮಾನಗಳನ್ನು ರಾಮದೇವ್ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದಾರೆ. ಅವರು ಯಾರೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಅಣ್ಣಾ ಅವರ ಗಮನಕ್ಕೆ ತಾರದೆ ಮುಂದಿನ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಿದ್ದಾರೆ~ ಎಂದು ತಂಡ ಆರೋಪಿಸಿದೆ.`ಗುಡಗಾಂವ್‌ನಲ್ಲಿ ಶುಕ್ರವಾರ ಅಣ್ಣಾ ಅವರು ರಾಮದೇವ್ ಅವರೊಂದಿಗೆ ಸಭೆ ನಡೆಸಿದ್ದರು. ಆ ಬಳಿಕ ಸುದ್ದಿಗೋಷ್ಠಿ ಏರ್ಪಡಿಸಿದ್ದ ವಿಷಯ ತಮಗೆ ತಿಳಿದಿರಲೇ ಇಲ್ಲ. ಕೆಲ ವಿಷಯಗಳ ಬಗ್ಗೆ ಚರ್ಚಿಸಲು ಸಭೆ ನಡೆಸಲಾಗಿತ್ತು. ಆದರೆ, ಸಭೆ ಬಳಿಕ ಅಣ್ಣಾ ಅವರಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡುವಂತೆ ಒತ್ತಡ ಹೇರಲಾಗಿತ್ತು. ಇದಕ್ಕೆ ನಾವು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತೇವೆ~ ಎಂದು ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.ರಾಮದೇವ್ ಅವರಿಗೆ ಸೇರಿದ ಪತಂಜಲಿ ಯೋಗಪೀಠ ಮತ್ತು ಅವರ ನಿಕಟವರ್ತಿ ಬಗ್ಗೆ ಗಂಭೀರವಾದ ಆರೋಪಗಳಿವೆ. ಚಳವಳಿಯಲ್ಲಿ ಇವರು ಭಾಗವಹಿಸುವುದರಿಂದ ತಮ್ಮ ಹೋರಾಟದ ಮಹತ್ವ ಕಡಿಮೆಯಾಗಬಹುದು ಎಂಬುದು ತಂಡದ ಕೆಲವರ ಅಭಿಪ್ರಾಯವಾಗಿದೆ.ಈ ಆರೋಪಗಳಿಗೆ ರಾಮದೇವ್ ಕಡೆಯಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಣ್ಣಾ ತಂಡದ ಉನ್ನತ ಸಮಿತಿ ಸಭೆ ಭಾನುವಾರ ನೋಯ್ಡಾದಲ್ಲಿ ನಡೆಯಲಿದ್ದು, ರಾಮದೇವ್ ನಡವಳಿಕೆ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.  ಅಣ್ಣಾ ಮೇ 1ರಂದು ಶಿರಡಿಯಿಂದ ಹಾಗೂ ರಾಮದೇವ್ ಛತ್ತೀಸ್‌ಗಡದ ದುರ್ಗದಿಂದ ಯಾತ್ರೆ ಆರಂಭಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.