ಬಾಬಾ ನಿರ್ಮಲ್ ಬಂಧನಕ್ಕೆ ವಾರಂಟ್

7

ಬಾಬಾ ನಿರ್ಮಲ್ ಬಂಧನಕ್ಕೆ ವಾರಂಟ್

Published:
Updated:

ಪಟ್ನಾ (ಐಎಎನ್‌ಎಸ್): ವಂಚನೆ ಆರೋಪದ ಪ್ರಕರಣ ಎದುರಿಸುತ್ತಿರುವ ಸ್ವಯಂ ಘೋಷಿತ ದೇವಮಾನವ ಬಾಬಾ ನಿರ್ಮಲ್ ಅವರ ಬಂಧನಕ್ಕೆ ಬಿಹಾರದ ನ್ಯಾಯಾಲಯ ಶನಿವಾರ ವಾರಂಟ್ ಜಾರಿ ಮಾಡಿದೆ.ಬಾಬಾ ಅವರ ಅನುಯಾಯಿಯೊಬ್ಬರು ಕಳೆದ ತಿಂಗಳು ನೀಡಿರುವ ದೂರಿನ ಸಂಬಂಧ ಪ್ರಕರಣ ದಾಖಲಾಗಿದ್ದು, ಇದನ್ನು ವಿಚಾರಣೆ ನಡೆಸುತ್ತಿರುವ ಅರಾರಿಯ ಜಿಲ್ಲೆಯ ನ್ಯಾಯಾಲಯವು ಈ ವಾರಂಟ್ ಹೊರಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಿರೀಕ್ಷಣಾ ಜಾಮೀನು ಕೋರಿ ಬಾಬಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಕಳೆದ ವಾರ ವಜಾ ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry