ಬಾಬಾ ರಾಮದೇವ್ ಬಂಧನಕ್ಕೆ ಆಕ್ರೋಶ: ಪ್ರತಿಭಟನೆ

ಶುಕ್ರವಾರ, ಜೂಲೈ 19, 2019
29 °C

ಬಾಬಾ ರಾಮದೇವ್ ಬಂಧನಕ್ಕೆ ಆಕ್ರೋಶ: ಪ್ರತಿಭಟನೆ

Published:
Updated:

ಬಳ್ಳಾರಿ: ಭ್ರಷ್ಟಾಚಾರ ನಿಯಂತ್ರಣಕ್ಕೆ ಒತ್ತಾಯಿಸಿ ನಿರಶನ ಆರಂಭಿಸಿದ ಯೋಗ ಗುರು ರಾಮದೇವ್‌ರನ್ನು ಬಂಧಿಸಿದ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಭಾರತ ಸ್ವಾಭಿಮಾನ ಟ್ರಸ್ಟ್, ಪತಂಜಲಿ ಯೋಗ ಮತ್ತುಇತರೇ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಭಾನುವಾರ ಪ್ರತಿಭಟನೆ ಹಮ್ಮಿ ಕೊಂಡಿದ್ದರು.ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ವಾಪಾಸು ತರುವ ಮೂಲಕ ಭಾರತದ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ಬಾಬಾ ರಾಮದೇವ್‌ರು ಉಪವಾಸ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಮಾನುಷವಾಗಿ ವರ್ತಿಸಿ ಬಂಧಿಸಿದ್ದಾರೆ. ಶಾಂತಿಯುತವಾಗಿ ಉಪ ವಾಸಕ್ಕೆ ಕುಳಿತಿದ್ದ ಬಾಬಾರನ್ನು ಬಂಧಿಸಿ ರುವುದು ಕೇಂದ್ರ ಸರಕಾರದ ಪ್ರಜಾ ಸತ್ತಾತ್ಮಕ ವಿರೋಧಿ ಧೋರಣೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ವಿದೇಶದಲ್ಲಿರುವ ದೇಶದ ಸಮಸ್ತ ಜನರಿಗೆ ಸೇರಿರುವ ಲಕ್ಷಾಂತರ ಕೋಟಿ ರೂ. ಕಪ್ಪುಹಣವಿದೆ. ವಿದೇಶದಲ್ಲಿರುವ ಎಲ್ಲ ಹಣವನ್ನು ಭಾರತಕ್ಕೆ ವಾಪಾಸು ತಂದು ರಾಷ್ಟ್ರೀಯ ಆಸ್ತಿ ಎಂದು ಘೋಷಿ ಸಿದಲ್ಲಿ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಆಗ್ರ ಹಿಸಿ ರಾಮದೇವ್‌ರು ಉಪವಾಸ ಆರಂಭಿಸಿದ್ದರು. ಬಾಬಾರ ಕರೆ ಹಿನ್ನೆಲೆ ಯಲ್ಲಿ ದೇಶದ ಲಕ್ಷಾಂತರ ಜನರು ಅನಿ ರ್ದಿಷ್ಟಾವಧಿ ಉಪವಾಸ ಕುಳಿತಿದ್ದರು. ಆದರೆ, ಹೊಸದಿಲ್ಲಿಯ ಮೈದಾನದಲ್ಲಿ ಪ್ರಜಾಸತ್ತಾತ್ಮಕವಾಗಿ  ರಾಮ್‌ದೇವ್‌ರು ನಡೆಸುತ್ತಿದ್ದ ಚಳವಳಿಯನ್ನು ಪೊಲೀಸರ ಮೂಲಕ ಹತ್ತಿಕ್ಕಲು ಕೇಂದ್ರ ಸರಕಾರ ಹುನ್ನಾರ ನಡೆಸಿದ್ದು, ಈ ಮೂಲಕ ಜನಪರ ಧ್ವನಿಯನ್ನು ದಮನ ಮಾಡುವ ಸಣ್ಣತನ ತೋರಿದೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಸಂಬಂಧಿ ಸಿದಂತೆ ಪ್ರಧಾನಮಂತ್ರಿ ಕ್ಷಮೆಯಾಚಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು ಎಂಬ ಎಚ್ಚರಿಕೆ ನೀಡಿದರು.ಭಾರತ ಸ್ವಾಭಿಮಾನ ಟ್ರಸ್ಟ್‌ನ ಜಿಲ್ಲಾ ಘಟಕ ಅಧ್ಯಕ್ಷ ನರಸಿಂಹಮೂರ್ತಿ, ಪತಂಜಲಿ ಯೋಗ ಸಮಿತಿಯ ಕೆ.ಸುಬ್ಬಾ ರಾವ್, ಎಸ್.ನಾಗೇಂದ್ರ, ಪಂಪಾಪತಿ, ದೇವೇಂದ್ರಪ್ಪ, ವಿಜಯಲಕ್ಷ್ಮಿ, ಲಕ್ಷ್ಮಿ, ಮಲ್ಲಿಕಾರ್ಜುನ ರೆಡ್ಡಿ, ಜಯಪ್ರಕಾಶ್, ವಿಶ್ವ ಹಿಂದೂ ಪರಿಷತ್ತಿನ ಮುಖಂಡ ಬಸವರಾಜ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಜೆ.ಸತ್ಯ ನಾರಾಯಣ, ಪಿ.ಎನ್.ಸುರೇಶ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಎಚ್.ಕೆ.ಗೌರಿಶಂಕರ್, ರೈತ ಸಂಘದ ವಕೀಲ ಕಂಪ್ಲಿ ತಿಮ್ಮಾರೆಡ್ಡಿ, ವಕೀಲರ ಸಂಘದ ಅನಿಲ್‌ಕುಮಾರ್ ನಾನಾ ಸಂಘ-ಸಂಸ್ಥೆಗಳ ನೂರಾರು ಕಾರ್ಯ ಕರ್ತರು ಪ್ರತಿಭಟನೆಯಲ್ಲಿ ಭಾಗ ವಹಿಸಿದ್ದರು. ಗಾಂಧಿಭವನ ಬಳಿಯ ಸಾಂಬಮೂರ್ತಿ ಮೈದಾನದಿಂದ ಆರಂಭಗೊಂಡ ಮೆರ ವಣಿಗೆ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿತು. ಚಳವಳಿಯ ನೇತೃತ್ವ ವಹಿಸಿದ್ದ ಭಾರತ ಸ್ವಾಭಿಮಾನ ಟ್ರಸ್ಟ್‌ನ ಪದಾಧಿಕಾರಿಗಳು ರಾಷ್ಟ್ರಪತಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಅಪರ ಜಿಲ್ಲಾ ಧಿಕಾರಿ ಜಿ.ಎನ್.ಶಿವಮೂರ್ತಿ ಸಲ್ಲಿಸಿ ದರು. ನಂತರ ಸಾಂಬಮೂರ್ತಿ ಮೈದಾ ನಕ್ಕೆ ತೆರಳಿದ ಪ್ರತಿಭಟನಾಕಾರರು ಪುನಹ ಉಪವಾಸ ಕುಳಿತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry