ಬಾಬಾ ರಾಮ್‌ದೇವ್‌ಗೆ ವಕೀಲರ ಬೆಂಬಲ

ಸೋಮವಾರ, ಜೂಲೈ 22, 2019
24 °C

ಬಾಬಾ ರಾಮ್‌ದೇವ್‌ಗೆ ವಕೀಲರ ಬೆಂಬಲ

Published:
Updated:

ಕೃಷ್ಣರಾಜಪೇಟೆ: ವಿದೇಶದಲ್ಲಿರುವ ಕಪ್ಪುಹಣವನ್ನು ದೇಶಕ್ಕೆ ಮರಳಿ ತರುವಂತೆ ಒತ್ತಾಯಿಸುತ್ತಿರುವ ಬಾಬಾ ರಾಮದೇವರನ್ನು ಬಂಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ತಾಲ್ಲೂಕು ವಕೀಲರ ಸಂಘದ ಸದಸ್ಯರು ಸೋಮವಾರ ನ್ಯಾಯಾಲಯ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು.ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಬಾಬಾರನ್ನು ಮಧ್ಯರಾತ್ರಿಯಲ್ಲಿ ಬಂಧಿಸುವ ಮೂಲಕ ಕೇಂ ್ರ ಸರ್ಕಾರ ಅಮಾನುಷವಾಗಿ ನಡೆದುಕೊಂಡಿದೆ. ರಾಷ್ಟ್ರದ ಹಿತಕ್ಕಾಗಿ ಬಾಬಾ ನಡೆಸುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಾಬಾರ ಹೋರಾಟಕ್ಕೆ ಸಂಘದ ಬೆಂಬಲ ವ್ಯಕ್ತಪಡಿಸುವ ನಿರ್ಣಯವನ್ನು ಸಹ ಕೈಗೊಳ್ಳಲಾಯಿತು.ಪ್ರತಿಭಟನೆಯ ಭಾಗವಾಗಿ ವಕೀಲರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ‌್ಯಾಲಿ ನಡೆಸಿ, ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದರು. ವಕೀಲರ ಸಂಘದ ಅಧ್ಯಕ್ಷ ರಾಮೇಗೌಡ, ಉಪಾಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ವಿ.ಎಸ್.ಧನಂಜಯ, ಸಹ ಕಾರ್ಯದರ್ಶಿ ಕೆ.ಎನ್.ಪಾಂಡು, ವಕೀಲರಾದ ಬಿ.ಎಲ್.ದೇವರಾಜು, ಚಂದ್ರಶೇಖರಯ್ಯ, ಬಂಡಿಹೊಳೆ ಗಣೇಶ್, ಎಂ.ಆರ್.ಪ್ರಸನ್ನಕುಮಾರ್, ಪಲ್ಲವಿ, ಸರೋಜಮ್ಮ ಮತ್ತಿತರರು ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry