ಶುಕ್ರವಾರ, ಜನವರಿ 24, 2020
22 °C

ಬಾಬಾ ಸಾಹೇಬರಿಗೆ ಭಾವಪೂರ್ಣ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ದೇಶದಲ್ಲಿ ಬಡಜನರು ನೆಮ್ಮದಿಯಿಂದ ಬದುಕಲು ಖಾಸಗಿ ರಂಗದಲ್ಲಿ ಮೀಸಲಾತಿ ತರಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಅಭಿಪ್ರಾಯ­ಪಟ್ಟರು.ಬಹುಜನ ಸಮಾಜಪಕ್ಷ ಬೆಂಗಳೂರು ಉತ್ತರ ಲೋಕಸಭಾಕ್ಷೇತ್ರ ಘಟಕದ ವತಿಯಿಂದ ಆಯೋಜಿಸಿದ್ದ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌­ರವರ 57ನೇ ಪರಿನಿರ್ವಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಪರಿಶಿಷ್ಟಜಾತಿ ಮತ್ತು ವರ್ಗಕ್ಕಷ್ಟೆ ಅಲ್ಲದೆ ಎಲ್ಲ ಜಾತಿ­ಗಳಲ್ಲಿರುವ ಬಡವರು, ಅಲ್ಪ­ಸಂಖ್ಯಾತರು ಹಾಗೂ ಹಿಂದುಳಿದ ಜನರಿಗೂ ಮೀಸಲಾತಿ ದೊರೆಯಬೇಕು ಎಂದು ಸಲಹೆ ನೀಡಿದರು.ಎಲ್ಲ ಜಾತಿ, ಧರ್ಮದಲ್ಲಿರುವ ಶೋಷಿತರ ಪರವಾಗಿ ಹೋರಾಟ ಮಾಡಿದ ಮಹಾನ್‌ ವ್ಯಕ್ತಿ ಅಂಬೇಡ್ಕರ್ ಎಂದು ಬಣ್ಣಿಸಿದರು.

ಪ್ರತಿಕ್ರಿಯಿಸಿ (+)