ಬಾಬುಸಾಬ್ ಪಾಳ್ಯಕ್ಕೆ ಬಸ್ ಬರಲಿ

7

ಬಾಬುಸಾಬ್ ಪಾಳ್ಯಕ್ಕೆ ಬಸ್ ಬರಲಿ

Published:
Updated:

ಈಚಿನ ದಿನಗಳಲ್ಲಿ ಬಾಬುಸಾಬ್ ಪಾಳ್ಯಕ್ಕೆ ಬರಬೇಕಾಗಿದ್ದ ಹಲವಾರು ಬಸ್‌ಗಳು, ರಿಂಗ್ ರಸ್ತೆಯ ಆಚೆ ಇರುವ ಕಲ್ಯಾಣನಗರಕ್ಕೆ ಬಂದು ವಾಪಸಾಗುತ್ತಿವೆ. ಅಲ್ಲದೆ, ಮಧ್ಯಾಹ್ನ 3 ರಿಂದ 5 ಗಂಟೆಯ ತನಕ ಯಾವುದೇ ಬಸ್ ಸೌಲಭ್ಯವಿಲ್ಲದೆ ಬಾಬುಸಾಬ್ ಪಾಳ್ಯದ ಜನರು ಬಹಳ ತೊಂದರೆ ಅನುಭವಿಸುವಂತೆ ಆಗುತ್ತಿದೆ. ಈಚಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗಿ, ವಿಶೇಷ ಒತ್ತಡ ಉಂಟಾಗಿದ್ದು, ಹೆಚ್ಚುವರಿ ಬಸ್‌ಗಳ ಅಗತ್ಯ ಕಂಡುಬರುತ್ತಿದೆ.  ಬಾಬುಸಾಬ್ ಪಾಳ್ಯದಿಂದ ಶಿವಾಜಿನಗರದ ಕಡೆ, 303ಸಿ, 302ಜಿ, ಮೆಜೆಸ್ಟಿಕ್ ಕಡೆಗೆ 302ಎ, 302ಎಫ್, ಮಾರ್ಕೆಟ್ ಕಡೆಗೆ 302ಸಿ ಮತ್ತು ಬನಶಂಕರಿ ಕಡೆಗೆ ಎಂ.ಬಿ.ಎಸ್. 8/412 ಮಾರ್ಗದಲ್ಲಿ ಹೆಚ್ಚುವರಿ ಬಸ್‌ಗಳನ್ನು ಚಲಿಸುವಂತೆ ಮಾಡಬೇಕೆಂದು ವಿನಂತಿಸುತ್ತೇವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry