ಭಾನುವಾರ, ನವೆಂಬರ್ 17, 2019
29 °C

ಬಾಬೂಜಿ ಆದರ್ಶ ಅನುಕರಣೀಯ

Published:
Updated:

ರಾಮನಗರ: ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ ತತ್ವಗಳು ಹಾಗೂ ಅವರ ಆದರ್ಶ ಅನುಕರಣೀಯವಾದುದು ಎಂದು ಶಾಸಕ ಕೆ.ರಾಜು ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಜಂಟಿಯಾಗಿ ಜಿಲ್ಲಾ ಕಂದಾಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬಾಬೂಜಿ 26 ನೇ ಪುಣ್ಯ ತಿಥಿ ಕಾಯಕ್ರಮದಲ್ಲಿ ಅವರು ಮಾತನಾಡಿದರು.ದೇಶದ ಪ್ರಧಾನಿಯಾಗುವ ಎಲ್ಲ ಅರ್ಹತೆ ಮತ್ತು ಅವಕಾಶ ಇದ್ದರೂ ಅಂದಿನ ರಾಜಕೀಯ ಮೇಲಾಟಗಳಿಂದ ಬಾಬೂಜಿ ಅವರಿಗೆ ಪ್ರಧಾನಿಯಾಗುವ ಅವಕಾಶ ದೊರೆಯಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಮಾತನಾಡಿ, ಸಾಮಾಜಿಕ ಆಂದೋಲನದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಧ್ವನಿಗೆ ಧ್ವನಿಯಾಗಿ ಹೋರಾಡಿದ ಮಹಾನ್ ನಾಯಕ ಬಾಬು ಜಗಜೀವನರಾಮ್ ಎಂದು ಬಣ್ಣಿಸಿದರು.ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜಯ ಪ್ರಕಾಶ್ ನಾರಾಯಣ ಅವರ ಪ್ರಭಾವಕ್ಕೆ ಒಳಗಾದ ಅವರ ಹೋರಾಟ ಮತ್ತಷ್ಟು ಮೊನಚು ಪಡೆಯಿತು. ಕ್ರಾಂತಿಕಾರಿ ವ್ಯಕ್ತಿಯಾಗಿದ್ದ ಅವರು ದೇಶದ ಪ್ರಧಾನಿ ಸ್ಥಾನ ಅಲಂಕರಿಸಬೇಕಿತ್ತು ಎಂದರು.ನಗರ ಸಭಾಧ್ಯಕ್ಷರಾದ ಸಾಬಾನ್‌ಸಾಬ್, ಜಿ.ಪಂ. ಅಧ್ಯಕ್ಷೆ ಯು.ಪಿ.ನಾಗೇಶ್ವರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲ್, ಜಿ.ಪಂ. ಸಿಇಒ ಕೆ.ಎಸ್.ವೆಂಕಟೇಶಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ, ಉಪ ವಿಭಾಗಾಧಿಕಾರಿ ಡಾ. ಸ್ನೇಹಾ, ದಲಿತ ಒಕ್ಕೂಟದ ಸಂಚಾಲಕರು, ಪದಾಧಿಕಾರಿಗಳು, ಪ್ರಗತಿ ಸಂಘಟನೆಗಳ ಪದಾಧಿಕಾರಿಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ತಿಮ್ಮಪ್ಪ ಸ್ವಾಗತಿಸಿದರು. ತಹಸೀಲ್ದರ್ ಡಾ. ರವಿ ತಿರ್ಲಾಪುರ ವಂದಿಸಿದರು.

ಪ್ರತಿಕ್ರಿಯಿಸಿ (+)