ಗುರುವಾರ , ಆಗಸ್ಟ್ 22, 2019
23 °C

ಬಾಯಿ, ಚರ್ಮ ಕ್ಯಾನ್ಸರ್‌ಗೆ ಮೀನು ಮದ್ದು

Published:
Updated:

ಲಂಡನ್ (ಪಿಟಿಐ): ಬಾಯಿ ಹಾಗೂ ಚರ್ಮ ಕ್ಯಾನ್ಸರ್‌ಗೆ ಮೀನು ರಾಮಬಾಣದಂತೆ ಕೆಲಸ ಮಾಡುತ್ತದೆ  ಎಂದು ನೂತನ ಸಂಶೋಧನೆಯೊಂದು ತಿಳಿಸಿದೆ.

`ಒಮೆಗಾ-3' ಅಂಶ ಹೊಂದಿರುವ ಸಾಲ್ಮನ್ ಮತ್ತು ಟ್ರೌಟ್ ಮೀನಿನ (ಸಿಹಿನೀರಿನ ಮೀನು) ಸೇವನೆಯಿಂದ ಬಾಯಿ ಹಾಗೂ ಚರ್ಮ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಜೀವಕೋಶಗಳನ್ನು ಸುಲಭವಾಗಿ ನಾಶಗೊಳಿಸಬಹುದು ಹಾಗೂ ಈ ಕ್ಯಾನ್ಸರ್‌ಗಳು ಮರುಕಳುಹಿಸದಂತೆ  ತಡೆಯಬಹುದು ಎಂದು ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.ಮೀನಿನ ಸೇವನೆಯಿಂದ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಹಾಗೂ ಕ್ಯಾನ್ಸರ್ ಅನ್ನು ಹೆಚ್ಚಿಸಬಲ್ಲ ಜೀವಕೋಶಗಳ ಬೆಳವಣಿಗೆಗೆ ಪ್ರತಿರೋಧ ಒಡ್ಡಬಹುದು ಎಂದು ವಿಜ್ಞಾನಿಗಳು ಪ್ರಯೋಗದಲ್ಲಿ ಕಂಡುಕೊಂಡಿದ್ದಾರೆ.`ಒಮೆಗಾ-3' ಫ್ಯಾಟಿ ಆಸಿಡ್ ಕ್ಯಾನ್ಸರ್‌ನ ಜೀವಕೋಶಗಳು ದೇಹದ ಇತರ ಅಂಗಾಂಶಗಳಿಗೆ ಸಾಂಕ್ರಾಮಿಕವಾಗಿ ಹರಡದಂತೆ ತಡೆಗಟ್ಟುತ್ತದೆ. `ಒಮೆಗಾ-3' ಅಂಶವು ಇತರ ಸಾಮಾನ್ಯ ಜೀವಕೋಶಗಳ ಮೇಲೆ ಯಾವುದೇ ವ್ಯತಿರಿಕ್ತ ಅಥವಾ ಅಡ್ಡ ಪರಿಣಾಮ ಕೂಡಾ ಬೀರುವುದಿಲ್ಲ. ಇದರಿಂದಾಗಿ `ಒಮೆಗಾ-3' ಅಂಶ ಬಾಯಿ ಹಾಗೂ ಚರ್ಮ ಕ್ಯಾನ್ಸರ್‌ಗೆ ಔಷಧಿಯಾಗಿಯೂ ಹಾಗೂ ಕ್ಯಾನ್ಸರ್ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ.`ಒಮೆಗಾ-3' ಪಾಲಿಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಅನ್ನು ಮನುಷ್ಯ ತನ್ನ ದೇಹದಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲಾರ. ಈ ಆಸಿಡ್ ಅನ್ನು ಆಹಾರದ ಮೂಲಕವೇ ಬೃಹತ್ ಪ್ರಮಾಣದಲ್ಲಿ ಪಡೆಯಬಹುದು.`ಸ್ಕ್ವಾಮೌಸ್-ಸೆಲ್ ಕಾರ್ಸಿನೋಮ' (ಎಸ್‌ಸಿಸಿ) ಎನ್ನುವ ನಿರ್ದಿಷ್ಟ ಬಾಯಿ ಕ್ಯಾನ್ಸರ್ ಕುರಿತು ವಿಜ್ಞಾನಿಗಳು ಅಧ್ಯಯನ ನಡೆಸಿದ್ದು, ಎಸ್‌ಸಿಸಿ ಅಂಶವು ಚರ್ಮದ ಹೊರ ಪದರದಲ್ಲಿರುತ್ತದೆ. ಈ ಅಂಶವೇ ಬಾಯಿ ಕ್ಯಾನ್ಸರ್‌ಗೆ ಕಾರಣವಾಗಬಲ್ಲದು.  ಸ್ಕ್ವಾಮೌಸ್ ಜೀವಕೋಶಗಳು ಚರ್ಮದ ಮೇಲ್ಪದರದಲ್ಲಷ್ಟೇ ಅಲ್ಲದೇ, ಜೀರ್ಣಾಂಗದ ದ್ವಾರ, ಶ್ವಾಸಕೋಶ ಮತ್ತು ದೇಹದ ಇನ್ನಿತರ ಭಾಗಗಳಲ್ಲೂ ಕಂಡುಬರುತ್ತದೆ. ಸ್ಕ್ವಾಮೌಸ್ ಸೆಲ್ ಬಾಯಿ ಕ್ಯಾನ್ಸರ್ ವಿಶ್ವದೆಲ್ಲೆಡೆ ತೀವ್ರಗತಿಯಲ್ಲಿ ಕಂಡುಬರುತ್ತಿದೆ. ಈ ಕ್ಯಾನ್ಸರ್‌ಗೆ ಚಿಕಿತ್ಸೆ ತುಂಬಾ ದುಬಾರಿಯಾಗಿದ್ದು, ಇದರ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಲ್ಲಿ ಮೀನು ಪ್ರಧಾನ ಪಾತ್ರ ವಹಿಸುತ್ತದೆ. ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.`ಒಮೆಗಾ-3' ಬಾಯಿ ಮತ್ತು ಚರ್ಮ ಕ್ಯಾನ್ಸರ್ ಜೀವಕೋಶಗಳ ಮೇಲೆ ಪರಿಣಾಮಕಾರಿ ಪ್ರಭಾವ ಬೀರುತ್ತವೆ. ಇದರಿಂದ ಇತರ ಸಾಮಾನ್ಯ ಜೀವಕೋಶಗಳ ಮೇಲೂ ಯಾವುದೇ ಅಡ್ಡಪರಿಣಾಮಗಳೂ  ಆಗುವುದಿಲ್ಲ ಎಂದು ಕ್ವೀನ್ ಮೇರಿ ವಿವಿಯ ವಿಜ್ಞಾನಿ ಪ್ರೊ.ಅದಿನಾ ಮಿಚೈಲ್-ಟೈಟುಸ್  ಹೇಳಿದ್ದಾರೆ.

Post Comments (+)