ಶನಿವಾರ, ಮೇ 28, 2022
24 °C

ಬಾರದ ಅಧಿಕಾರಿ: ಕಾದು ಸುಸ್ತಾದ ಮೀನುಗಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದೇಬಿಹಾಳ: ತಾಲ್ಲೂಕಿನ ಮೀನುಗಾರರ ಮಹಿಳಾ ಸಂಘದ  ಸಮಸ್ಯೆಗಳನ್ನು ಕೇಳುತ್ತೇನೆಂದು ಹೇಳಿದ್ದ ಮೀನುಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿ ಬಿ.ಎಸ್. ಲಮಾಣಿ ಅವರು ಬಾರದ್ದರಿಂದ ದೂರದ ಊರುಗಳಿಂದ ತಮ್ಮ ಅಹವಾಲು ಹೇಳಲು ಬಂದಿದ್ದ ಮೀನುಗಾರರು ನಿರಾಶೆಯಿಂದ ಮರಳಿದ ಪ್ರಸಂಗ ಭಾನುವಾರ ನಡೆಯಿತು.ತಾಲ್ಲೂಕಿನ ಮೀನುಗಾರರು  ಹಳೆಯ ಸಾಂಪ್ರದಾಯಿಕ ಮೀನು ಬಲೆಗಳನ್ನು ಬಳಸುತ್ತಿದ್ದು, ಅವುಗಳಲ್ಲಿ ದೊಡ್ಡ ರಂಧ್ರಗಳಿರುವ ಕಾರಣ ಸಣ್ಣ ಮೀನು ಗಳನ್ನು ಹಿಡಿಯುವುದಿಲ್ಲ, ಆದರೆ ಆಂಧ್ರ ಪ್ರದೇಶದ ಮೀನುಗಾರರು ಸಮುದ್ರ ದಲ್ಲಿ ಉಪಯೋಗಿಸುವ ಬಲೆಗಳನ್ನು ಬಳಸಿ ಮೀನುಗಾರಿಕೆ ಮಾಡುವುದರಿಂದ ಎಲ್ಲ ಸಣ್ಣ ಮೀನುಗಳು ಸಹ ಬಲೆಗೆ ಬಿದ್ದು ನಮಗೆ ಮೀನುಗಾರಿಕೆ ಮಾಡಲು ಆಗುತ್ತಿಲ್ಲ.

 

ಜೊತೆಗೆ ಅವರು ಬಳಸುವ ಮೀನು ಬಲೆಗಳಿಂದಾಗಿ ಮೀನು ಸಂತ ತಿಯೇ ಬಹಳಷ್ಟು ಕಡಿಮೆಯಾಗುತ್ತದೆ. ಹೀಗಾಗಿ ನಮಗೆ ನ್ಯಾಯ ಒದಗಿಸಬೇಕು ಎನ್ನುವುದು ಮೀನುಗಾರರ ಸಂಘದ ಪ್ರಮುಖ ಬೇಡಿಕೆಯಾಗಿತ್ತು. ಇದರೊಂ ದಿಗೆ ಮತ್ತಿತರ ಬೇಡಿಕೆಗಳ ಬಗ್ಗೆ ಮಾತ ನಾಡಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದ್ದ ಅಧಿಕಾರಿಗಳು ಬರದಿರುವುದು ಮೀನುಗಾರರಲ್ಲಿ ನಿರಾಶೆ ಮೂಡಿಸಿತು.ವಿಜಾಪುರದಿಂದ ಬರುವ ಅಜೀಜ ಸೋನೇವಾಲಿ ಎನ್ನುವ ಮೀನು ಮಾರಾಟ ಗುತ್ತಿಗೆದಾರರು ನದಿ ದಂಡೆಗೆ ತೆರಳಿ ಅಲ್ಲಿಂದಲೇ ಮೀನುಗಾರರ ಮೂಲಕ ರೂ. 40ಕ್ಕೆ ಒಂದು ಕೆ.ಜಿ.ಯಂತೆ ಮೀನು ಖರೀದಿಸಿ, ಅವುಗಳನ್ನು ಮಹಾರಾಷ್ಟ್ರದಲ್ಲಿ ರೂ. 300ರಂತೆ ಮಾರಾಟ ಮಾಡಿ ಲಾಭ ಗಳಿಸುತ್ತಾರೆ.

 

ಆದರೆ ಇದೇ ಲಾಭ ಬಡ ಮೀನುಗಾರರಿಗೆ ದಕ್ಕುವದಿಲ್ಲ, ಇನ್ನು ರಕ್ಕಸಗಿ, ಮದರಿ ಬೈಲಕೂರ ಮೊದಲಾದ ಕಡೆ ಆಂಧ್ರದ ಮೀನುಗಾರರು ವ್ಯಾಪಕ ಮೀನುಗಾರಿಕೆ ಮಾಡುವುದರಿಂದ ಸ್ಥಳೀಯರಿಗೆ ಬಹಳ ಅನ್ಯಾಯವಾಗುತ್ತಿದೆ ಎಂದು ಮೀನುಗಾರರು ದೂರಿದರು.ಈ ಕೂಡಲೇ ತಮಗೆ ಅನುಕೂಲವಾಗುವಂತೆ ಕಾನೂನು ಮಾಡಬೇಕು. ಆಂಧ್ರದ ಮೀನುಗಾರರಿಗೆ ನೀಡಿರುವ ಲೈಸೆನ್ಸ್ ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ  ಸಂಘದ ಅಧ್ಯಕ್ಷೆ ಶಾಂತಾ ಮುದೂರ, ಉಪಾಧ್ಯಕ್ಷೆ ಹಳ್ಳೆಮ್ಮ ದಾಸರ, ಕಾರ್ಯದರ್ಶಿ  ನೀಲಮ್ಮ ನಾಗರಾಳ, ಸಿದ್ದು ಕಟ್ಟಿಮನಿ, ಭೀಮಣ್ಣ ಹಂಡರಗಲ್ಲ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.